ಬೆಂಗಳೂರು ಪಶ್ಚಿಮ ವಿಭಾಗ ಪೊಲೀಸರ ಕಾರ್ಯಾಚರಣೆ : 5 ಕೆಜಿ ಗಾಂಜಾ ವಶ, 15 ಮಂದಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.5- ಪಶ್ಚಿಮ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಕಳೆದ ಐದು ದಿನಗಳಿಂದ 12 ಪ್ರಕರಣಗಳನ್ನು ಪತ್ತೆಹಚ್ಚಿ 15 ಮಂದಿ ಆರೋಪಿಗಳನ್ನು ಬಂಧಿಸಿ 5 ಕೆಜಿ 916 ಗ್ರಾಂ ತೂಕದ ಗಾಂಜಾ, 25 ಸಾವಿರ ಹಣ, 3 ಮೊಬೈಲ್, ಇಂಡಿಕಾ ಕಾರು ಹಾಗೂ ಸುಜುಕಿ ಬೈಕ್ ವಶಪಡಿಸಿಕೊಂಡಿದ್ದಾರೆ.

# ಮಾಗಡಿ ರಸ್ತೆ:
ವೆಸ್ಟ್‍ಆಫ್ ಕಾರ್ಡ್‍ರೋಡ್ ಬಳಿಯ ಪಾರ್ಕ್ ರಸ್ತೆ ಸಮೀಪ ಇಂದು ಗಾಂಜಾ ಮಾರಾಟ ಮಾಡುತ್ತಿದ್ದ ಸುನಿಲ್, ರಘು ಎಂಬುವವರನ್ನು ಬಂಧಿಸಿ 545 ಗ್ರಾಂ ತೂಕದ ಗಾಂಜಾ, 20 ಸಾವಿರ ಹಣ, ಇಂಡಿಕಾ ಕಾರು, 3 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಮಾಗಡಿ ರಸ್ತೆ ವ್ಯಾಪ್ತಿಯ ರಾಜಾಜಿನಗರ 5ನೆ ಬ್ಲಾಕ್ ಎಸ್‍ಜೆಆರ್ ಕಾಲೇಜು ಹಿಂಭಾಗ ಧನರಾಜ್ ಎಂಬಾತನನ್ನು ಬಂಧಿಸಿ 970 ಗ್ರಾಂ ಗಾಂಜಾ, 1500ರೂ. ನಗದು ಹಾಗೂ 1 ಬೈಕ್ ವಶಪಡಿಸಿಕೊಂಡಿದ್ದಾರೆ.

# ಜ್ಞಾನಭಾರತಿ:
ನೈಸ್ ರಸ್ತೆಯ ರಾಮಸಂದ್ರ ಮುಖ್ಯರಸ್ತೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಫಹಾದ್ ಎಂಬಾತನನ್ನು ಬಂಧಿಸಿ 800 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡಿದ್ದಾರೆ.

# ರಾಜರಾಜೇಶ್ವರಿನಗರ:
ಚನ್ನಸಂದ್ರದ ಸಂಕ್ರಾಂತಿ ಡಾಬಾ ಬಳಿ ರವಿ ಎಂಬಾತನನ್ನು ಬಂಧಿಸಿ 280 ಗ್ರಾಂ ಗಾಂಜಾ, 600ರೂ. ವಶಪಡಿಸಿಕೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಬಿಇಎಂಎಲ್ ಲೇಔಟ್, ಬಿಡಿಎ ಕಾಂಪ್ಲೆಕ್ಸ್ ಬಳಿ ಆರೋಪಿ ಅರೋನಾ ಶರೀಫ್ ಎಂಬಾತನನ್ನು ಬಂಧಿಸಿ 620 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

# ಚಾಮರಾಜಪೇಟೆ:
ಅಶ್ವತ್ಥಕಟ್ಟೆ ರಸ್ತೆಯ ಬಂಡೆ ಗುಡಿಸಲು ಬಳಿ ಸಲ್ಮಾನ್ ಎಂಬಾತನನ್ನು ಬಂಧಿಸಿ 500 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಇದೇ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇರ್ಫಾನ್ ಎಂಬಾತನನ್ನು ಬಂಧಿಸಿ 450 ಗ್ರಾಂ ತೂಕದ ಗಾಂಜಾ, 1120 ಹಣ ವಶಪಡಿಸಿಕೊಂಡಿದ್ದಾರೆ. ಇದೇ ವ್ಯಾಪ್ತಿಯ ಮತ್ತೊಂದು ಪ್ರಕರಣದಲ್ಲಿ ಇರ್ಫಾನ್‍ಖಾನ್ ಎಂಬಾತನನ್ನು ಬಂಧಿಸಿ 450 ಗಾಂಜಾ ವಶಪಡಿಸಿಕೊಂಡಿದ್ದಾರೆ.

# ಜೆಜೆ ನಗರ:
ಹಳೆಗುಡ್ಡದಹಳ್ಳಿ ಈದ್ಗಾ ಮೈದಾನದ ಬಳಿ ಮುನಿಯಾಂಡಿ ಮತ್ತು ಮುಬಾರಕ್ ಎಂಬುವವರನ್ನು ಪೊಲೀಸರು ಬಂಧಿಸಿ 474 ಗ್ರಾಂ ಗಾಂಜಾ, 1500ರೂ. ವಶಪಡಿಸಿಕೊಂಡಿದ್ದಾರೆ.

# ಬಸವೇಶ್ವರನಗರ:
ನೇತಾಜಿ ಆಟದ ಮೈದಾನದ ಬಳಿ ಮಂಜುನಾಥ್ ಎಂಬಾತನನ್ನು ಬಂಧಿಸಿ 380 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

# ಕಾಟನ್‍ಪೇಟೆ:
ಬಾಳೆಕಾಯಿ ಮಂಡಿ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಜ್ಯೋತಿ ಮತ್ತು ರಾಜೇಶ್ವರಿ ಎಂಬುವವರನ್ನು ಬಂಧಿಸಿ 250 ಗ್ರಾಂ ಗಾಂಜಾ ಹಾಗೂ 300ರೂ. ವಶಪಡಿಸಿಕೊಂಡಿದ್ದಾರೆ.

# ಚಂದ್ರಾ ಲೇಔಟ್:
ಬಿಬಿಎಂಪಿ ಪಾರ್ಕ್ 6ನೆ ಕ್ರಾಸ್ ಬಳಿ ಫಯಾಜ್ ಶೇಖ್ ಎಂಬಾತನನ್ನು ಪೊಲೀಸರು ಬಂಧಿಸಿ 200ಗ್ರಾಂ ಗಾಂಜಾ ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Facebook Comments