ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.9- ಮಾದಕವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ತುಮಕೂರು ಹಾಗೂ ಬೆಂಗಳೂರು ಮೂಲದ ನಾಲ್ವರನ್ನು ಉತ್ತರ ವಿಭಾಗದ ಆರ್.ಎಂ.ಸಿ.ಯಾರ್ಡ್ ಠಾಣೆ ಪೊಲೀಸರು ಬಂಧಿಸಿ 2.1 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.  ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕಿನ ನವೀನ್(19), ಅಜಯ್‍ಕುಮಾರ್(20), ರಾಹುಲ್(20), ಲಗ್ಗೆರೆಯ ನವೀನ್(20) ಬಂಧಿತರು.

ನಗರದ ಆರ್‍ಎಂಸಿಯಾರ್ಡ್ ಪೊಲಿಸ್ ಠಾಣೆ ಸರಹದ್ದಿನ ಯಶವಂತಪುರ ಇಂಡಸ್ಟ್ರೀಯಲ್ ಸಬರ್ಬ್, ಡಿಡಿಯುಟಿಟಿಎಲ್, ಹರಿಣಿ ಕಾರ್ಗೋ ಮತ್ತು ಮೂವರ್ಸ್ ಮುಂಭಾಗದಲ್ಲಿ ನಾಲ್ವರು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮಾದಕ ವಸ್ತು ವಶಕ್ಕೆ ತೆಗೆದುಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಬೆಂಗಳೂರು ಉಲ್ಲಾಳ ಉಪನಗರದ ಕಾರ್ತಿಕ್ ಮತ್ತು ಅಮೀದ್ ಎಂಬುವವರು ತಮಗೆ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದು, ತಾವು ತಂದು ಹೆಚ್ಚಿನ ಬೆಲಗೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗಿ ತನಿಖೆಯಿಂದ ತಿಳಿದುಬಂದಿರುತ್ತದೆ.

Facebook Comments