ಒಡಿಶಾ-ಆಂಧ್ರದ ಐವರು ಸೆರೆ, ಮಾದಕ ವಸ್ತು ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.10- ಗಾಂಜಾ ಮಾರಲು ಬಂದಿದ್ದ ಒಡಿಶಾ ಹಾಗೂ ಆಂಧ್ರಪ್ರದೇಶ ಮೂಲದ ಐದು ಮಂದಿಯನ್ನು ತಲ್ಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿ ಎರಡು ಲಕ್ಷ ರೂ. ಬೆಲೆ ಬಾಳುವ 10 ಕೆಜಿ 270 ಗ್ರಾಂ ಗಾಂಜಾ ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಒಡಿಶಾ ರಾಜ್ಯದ ಅಮನ್ ಪ್ರಧಾನ್(23) , ಆಂಧ್ರಪ್ರದೇಶದಥರಪಟ್ಲಾ ಮೌಲಿ(25), ದುರ್ಗಪ್ರಸಾದ್(23), ಅಭಿಷೇಕ್(23),ಉದಯ್(24) ಬಂಧಿತರು.

ತಲ್ಲಘಟ್ಟಪುರ ವ್ಯಾಪ್ತಿಯ ಆವಲಹಳ್ಳಿ ಎಚ್‍ಎಂ ವಲ್ರ್ಡ್ ಸಿಟಿ ಅಪಾರ್ಟ್‍ಮೆಂಟ್ ಮುಂಭಾಗದ ಖಾಲಿ ಜಾಗದಲ್ಲಿ ಎರಡು ಬ್ಯಾಗ್‍ಗಳಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಲು ಬಂದಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.  ಖಚಿತ ಮಾಹಿತಿ ಮೇರೆಗೆ ಪೊಲೀಸರು ಮತ್ತು ಪಂಚನಾಮರ ಸಮಕ್ಷಮದಲ್ಲಿ ದಾಳಿ ಮಾಡಿ ಐದು ಮಂದಿಯನ್ನು ಬಂಧಿಸಿ ಆರೋಪಿಗಳಿಂದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಗಾಂಜಾ ಪ್ರಕರಣಗಳನ್ನು ಬೇಧಿಸಲು ವಿಶೇಷ ತಂಡವನ್ನು ರಚಿಸಿದ್ದು, ಈ ವಿಶೇಷ ತಂಡ ಹಗಲಿರುಳು ಶ್ರಮಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈ ಉತ್ತಮ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್ ಮತ್ತು ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತ ಸೋಮೇಂದ್ರ ಮುಖರ್ಜಿ ಶ್ಲಾಘಿಸಿದ್ದಾರೆ.

Facebook Comments