ಅಫೀಮ್ ಮಾರಾಟ : ಇಬ್ಬರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.11- ಮಾದಕ ವಸ್ತು ಅಫೀಮ್‍ನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಇಬ್ಬರನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಖದೀರ್ ಅಹಮ್ (24) ಮತ್ತು ಗೋಪಿ (24) ಬಂಧಿತ ಆರೋಪಿಗಳು.

ವಾಲ್ಮೀಕಿನಗರ ಹಾಗೂ ಕೆ.ಪಿ.ಅಗ್ರಹಾರ ನಿವಾಸಿಗಳಾದ ಇವರಿಬ್ಬರು ಉಪ್ಪಾರಪೇಟೆ ವ್ಯಾಪ್ತಿಯ ತುಳಸಿ ಪಾರ್ಕ್‍ನ ಮೆಟ್ರೋ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಮಾದಕ ವಸ್ತು ಅಫೀಮ್ ಮಾರಾಟ ಮಾಡಲು ಬಂದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಇನ್ಸ್‍ಪೆಕ್ಟರ್ ಸುರೇಶ್ ಹಾಗೂ ಸಿಬ್ಬಂದಿ ದಾಳಿ ಮಾಡಿ 2.50 ಲಕ್ಷ ರೂ. ಬೆಲೆಯ 600 ಗ್ರಾಂ ತೂಕದ ಅಫೀಮ್ ಹಾಗೂ ಮೊಬೈಲ್‍ನ್ನು ವಶಪಡಿಸಿಕೊಂಡಿದ್ದಾರೆ.

Facebook Comments