ಗಾಂಜಾ ಸರಬರಾಜು-ಮಾರಾಟ ಮಾಡಿದ್ದ ಮೂವರು ಪೊಲೀಸರ ಬಲೆಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.19- ಮಾದಕವಸ್ತು ಗಾಂಜಾವನ್ನು ಮಾರಾಟ ಮಾಡಲು ಬಂದಿದ್ದ ಹಾಗೂ ಸರಬರಾಜು ಮಾಡಿದ್ದ ಮೂವರನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾಗದೇವನಹಳ್ಳಿ ನಿವಾಸಿ ಮದುನ್‍ಕುಮಾರ್(22) ಮತ್ತು ಹೇಮಂತ್ ಕುಮಾರ್(20), ತೇಜಸ್(20) ಬಂಧಿತರು.

ಸೆ.17ರಂದು ಬಸವೇಶ್ವರನಗರ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಶಿವನಗರದ ಗಂಗಮ್ಮ, ತಿಮ್ಮಯ್ಯ ಸರ್ಕಾರಿ ಶಾಲೆ ಎದುರಿನ ಆಟದ ಮೈದಾನದಲ್ಲಿ ವ್ಯಕ್ತಿಯೊಬ್ಬ ಮಾದಕ ವಸ್ತು ಗಾಂಜಾ ಮಾರಾಟ  ಮಾಡಲು ಬಂದಿರುವ ಬಗ್ಗೆ ಮಾಹಿತಿ ಲಭಿಸಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಇನ್‍ಸ್ಪೆಕ್ಟರ್ ಎರ್ರಿಸ್ವಾಮಿ ಹಾಗೂ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ನಾಗದೇವನಹಳ್ಳಿ ನಿವಾಸಿ ಆರೋಪಿ ಮದನ್‍ಕುಮಾರ್(22)ನನ್ನು ಬಂಧಿಸಿ 1 ಕೆಜಿ 50 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದರು.

ಈತನನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಮಾದಕವಸ್ತು ಗಾಂಜಾವನ್ನು ಹೇಮಂತ್‍ಕುಮಾರ್ ಮತ್ತು ತೇಜಸ್ ಅವರಿಂದ ತೆಗೆದುಕೊಂಡು ಬಂದು ಗಿರಾಕಿಗಳಿಗೆ ಮಾರಾಟ ಮಾಡುವುದಾಗಿ ತಿಳಿಸಿದ್ದರ ಮೇರೆಗೆ ಮೋದಿ ರಸ್ತೆಯಲ್ಲಿ ಇವರಿಬ್ಬರನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ 2 ಕೆಜಿ 150 ಗ್ರಾಂ ಗಾಂಜಾ ಮತ್ತು 2 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments