ಪ್ರತ್ಯೇಕ ಪ್ರಕರಣ : ಮೂವರ ಬಂಧನ, 3.20 ಲಕ್ಷ ಮೌಲ್ಯದ ಗಾಂಜಾ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.20- ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರನ್ನು ಬಂಧಿಸಿ 3.20 ಲಕ್ಷ ರೂ. ಮೌಲ್ಯದ ಗಾಂಜಾ, ಆಟೋರಿಕ್ಷಾ, ಬೈಕ್ ಮತ್ತು ಮೊಬೈಲ್‍ನ್ನು ವಶಪಡಿಸಿಕೊಳ್ಳಲಾಗಿದೆ.

ಬ್ಯಾಡರಹಳ್ಳಿ: ಇಲ್ಲಿನ ಅಂಗಧೀರನಹಳ್ಳಿ ಡಿ ಗ್ರೂಪ್ ಬಡಾವಣೆ, ಆಚಾರ್ಯ ಕಾಲೇಜು ಬಳಿ ಗಾಂಜಾ ಮಾರಾಟ ಮಾಡಲು ಬಂದಿದ್ದ ಚಂದನ್ ಠಾಕೂರ್(24) ಮತ್ತು ಮುಖೇಶ್ ಸಿಂಗ್(25)ನನ್ನು ಬಂಧಿಸಿ 2.50 ಲಕ್ಷ ರೂ. ಬೆಲೆಯ 5 ಕೆಜಿ ಗಾಂಜಾ, ಕೃತ್ಯಕ್ಕೆ

ಬಳಸಿದ್ದ ಪಲ್ಸರ್ ಬೈಕ್, ಮೊಬೈಲ್, ತೂಕದ ಯಂತ್ರ, 1260 ರೂ.ಗಳನ್ನು ವಶಪಡಿಸಿಕೊಳ್ಳುವಲ್ಲಿ ಬ್ಯಾಡರಹಳ್ಳಿ ಠಾಣೆ ಇನ್‍ಸ್ಪೆಕ್ಟರ್ ರಾಜೀವ್ ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಕಲಾಸಿಪಾಳ್ಯ: ನ್ಯೂ ಪೆಟ್ನೂಲ್ ಪೇಟೆ, ಡಿಸ್ಪನ್ಸರಿ ರಸ್ತೆ, ಟಿಪ್ಪು ಆರ್ಮರಿ ಬಳಿ ಮಾದಕವಸ್ತು ಮಾರಾಟಕ್ಕೆ ಬಂದಿದ್ದ ವಿಜಯ್(24) ಎಂಬಾತನನ್ನು ಕಲಾಸಿಪಾಳ್ಯ ಠಾಣೆ ಇನ್‍ಸ್ಪೆಕ್ಟರ್ ಚಂದ್ರಕಾಂತ್ ಹಾಗೂ ಸಿಬ್ಬಂದಿಗಳು ಬಂಧಿಸಿ 70 ಸಾವಿರ ಬೆಲೆ 1.5 ಕೆಜಿ ಗ್ರಾಂ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.

Facebook Comments