ದ್ವಿಚಕ್ರ ವಾಹನ ಕಳ್ಳರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.20- ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಕೆಪಿ ಅಗ್ರಹಾರ ಠಾಣಾ ಪೆÇಲೀಸರು ಬಂಧಿಸಿ 3.50 ಲಕ್ಷ ರೂ. ಬೆಲೆ ಬಾಳುವ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ವಸೀಂಪಾಷ(25), ಅಬ್ಬಾಸ್ ಖಾನ್(24), ಶಾಬೀರ್ ಆಲಿ(22) ಮತ್ತು ಮೊಹಮ್ಮದ್ ನದೀಂ(28) ಬಂಧಿತ ಆರೋಪಿಗಳು.

ವಿಜಯ ನಗರ ಪೈಪ್‍ಲೈನ್ ರಸ್ತೆಯಲ್ಲಿ ನೆಲೆಸಿದ್ದ ಟಿವಿಎಸ್ ಅಪಾಚೆ ಬೈಕ್ ಕಳ್ಳತನವಾಗಿದ್ದ ಬಗ್ಗೆ ಕೆಪಿ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್‍ಪೆಕ್ಟರ್ ಸದಾನಂದ್ ಹಾಗೂ ಸಿಬ್ಬಂದಿ ತನಿಖೆ ನಡೆಸಿ ನಾಲ್ವರನ್ನು ಬಂಧಿಸಿ 10 ಬೈಕನ್ನು ವಶಪಡಿಸಿಕೊಂಡಿದ್ದಾರೆ.

ಕೆಪಿ ಅಗ್ರಹಾರ, ಬಾಣಸವಾಡಿ, ಅಮೃತಾಹಳ್ಳಿ, ಕಮರ್ಷಿಯಲ್ ಸ್ಟ್ರೀಟ್, ಕೃಷ್ಣರಾಜಪುರಂಪುಂ, ಡಿಜೆ ಹಳ್ಳಿ, ಕೆಜಿ ಹಳ್ಳಿ ಹಾಗೂ ಇನ್ನಿತರೇ ಠಾಣಾ ವ್ಯಾಪ್ತಿಗಳಲ್ಲಿ ಕಳವು ಮಾಡಿದ್ದ ಸುಮಾರು 3.50 ಲಕ್ಷ ರೂ. ಬೆಲೆ ಬಾಳುವ ವಿವಿಧ ಬಗೆಯ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ದ್ದಾರೆ.

Facebook Comments