ಹಳೆ ಆರೋಪಿ ಸೆರೆ, 2.4 ಲಕ್ಷ ಮೌಲ್ಯದ ಚಿನ್ನಾಭರಣ ಜಫ್ತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.28- ಹಗಲು ಮತ್ತು ರಾತ್ರಿ ಕನ್ನಗಳವು ಪ್ರಕರಣಗಳ ಆರೋಪಿಯೊಬ್ಬನನ್ನು ಬಂಧಿಸಿರುವ ಸಂಜಯನಗರ ಪೊಲೀಸರು 2.4 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಚಂದ್ರಾ ಬಡಾವಣೆಯ ಗಂಗೊಂಡನಹಳ್ಳಿ ನಿವಾಸಿ ಮೆಹಬೂಬ್ ಪಾಷ (22) ಬಂಧಿತ ಮನೆಗಳ್ಳ.

ಪಿರ್ಯಾದಿದಾರ ವಿಶುಕುಮಾರ್ ಎಂಬುವವರು ಕಳೆದ ಜೂನ್‍ನಲ್ಲಿ ಸಂಜಯನಗರ ಠಾಣೆಗೆ ಹಾಜರಾಗಿ ಕಾರ್ಯನಿಮಿತ್ತ ಪತ್ನಿಯೊಂದಿಗೆ ಹಾಸನಕ್ಕೆ ತೆರಳಿದ್ದು, ನಾಲ್ಕು ದಿನಗಳ ನಂತರ ಹಿಂದಿರುಗಿದಾಗ ಕಳ್ಳರು ಮನೆ ಬೀಗ ಮುರಿದು 60 ಗ್ರಾಂ ತೂಕದ ಚಿನ್ನ ಮತ್ತು ಬೆಳ್ಳಿ ಆಭರಣ, ರೇಷ್ಮೆ ಸೀರೆಗಳು ಹಾಗೂ ವಾಚುಗಳನ್ನು ಕಳವು ಮಾಡಲಾಗಿದೆ ಎಂದು ದೂರು ನೀಡಿದ್ದರು.

ಕಾರ್ಯಾಚರಣೆ ನಡೆಸಿದ ಸಂಜಯನಗರ ಪೊಲೀಸರು ಗಂಗೊಂಡನಹಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ ಮೆಹಬೂಬ್ ಪಾಷನನ್ನು ಬಂಧಿಸಿ ಆತ ನೀಡಿದ ಮಾಹಿತಿ ಮೇರೆಗೆ 2.4 ಲಕ್ಷ ಮೌಲ್ಯದ 60 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಆರೋಪಿ ಹಳೆ ಎಂಒ ಆಸಾಮಿಯಾಗಿದ್ದು, ಈತನ ವಿರುದ್ಧ 2018ನೆ ಸಾಲಿನಲ್ಲಿ ಚಂದ್ರಾ ಲೇಔಟ್ ಪೆÇಲೀಸ್ ಠಾಣೆಯಲ್ಲಿ ಸುಲಿಗೆ ಮತ್ತು ದರೋಡೆ ಪ್ರಕರಣಗಳು ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ.

Facebook Comments