ಚೋರನ ಬಂಧನ :12 ದ್ವಿಚಕ್ರ ವಾಹನಗಳ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.29-ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿ 5.99 ಲಕ್ಷ ರೂ. ಬೆಲೆಬಾಳುವ 12 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿ ದ್ದಾರೆ. ಆಜಾದ್‍ನಗರದ ನಿವಾಸಿ ಮನೋಜ್ (21) ಬಂಧಿತ ಆರೋಪಿ.

ಟಿವಿಎಸ್ ದ್ವಿಚಕ್ರ ವಾಹನವನ್ನು ಅ.3ರಂದು ಚಾಮರಾಜಪೇಟೆ 9ನೆ ಮುಖ್ಯರಸ್ತೆಯಲ್ಲಿ ನಿಲ್ಲಿಸಿದ್ದಾಗ ಕಳ್ಳತನವಾಗಿದ್ದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಇನ್ಸ್‍ಪೆಕ್ಟರ್ ಲೋಕಾಪೂರ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ 12 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಈತನ ಬಂಧನದಿಂದ ಜೆಜೆ ನಗರ, ಚಾಮರಾಜಪೇಟೆ, ಕಾಟನ್‍ಪೇಟೆ, ಕೆಂಪೇಗೌಡ ನಗರ, ಹನುಮಂತನಗರ, ಬ್ಯಾಟರಾಯನಪುರ, ಕೆಪಿ  ಅಗ್ರಹಾರ ಹಾಗೂ ರಾಮನಗರ ಗ್ರಾಮಾಂತರ ಠಾಣೆ ವ್ಯಾಪ್ತಿಗಳಲ್ಲಿ ಕಳವು ಮಾಡಿದ್ದ ವಾಹನಗಳು ಪತ್ತೆಯಾಗಿವೆ.

Facebook Comments