ನಾಲ್ವರು ಆರೋಪಿಗಳ ಬಂಧನ: 16.60 ಲಕ್ಷ ಮಾಲು ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.22- ನಾಲ್ಕು ಮಂದಿ ಆರೋಪಿಗಳನ್ನು ಬಂಸಿರುವ ಉಪ್ಪಾರಪೇಟೆ ಠಾಣೆ ಪೊಲೀಸರು 16.60 ಲಕ್ಷ ರೂ. ಬೆಲೆಯ ಆಭರಣಗಳು ನಗದು ಹಣ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ಅಪ್ರೋಜ್(40), ರವಿ(52), ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಲೋಹಿತ್(21), ಬಳ್ಳಾರಿ ಜಿಲ್ಲೆಯ ಅಕ್ಷಯ್ ಸುಶೀಲೇಂದ್ರರಾವ್ ಸಂಕನೂರ್(29) ಬಂತ ಆರೋಪಿಗಳು.

19ರಂದು ಮಧ್ಯಾಹ್ನ ಹಾಸನದಿಂದ ಬೆಂಗಳೂರಿಗೆ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಬಂದಿದ್ದ ವೇಳೆ ಪ್ರಯಾಣಿಕರೊಬ್ಬರ 50 ಸಾವಿರ ರೂ. ನಗದು ಹಾಗೂ 50 ಗ್ರಾಂ ತೂಕದ ಚಿನ್ನದ ಸರವಿದ್ದ ಬ್ಯಾಗ್ ಅನ್ನು ಆರೋಪಿಗಳು ಕಳುವು ಮಾಡಿದ್ದರು. ಆರೋಪಿಗಳಿಂದ ಉಪ್ಪಾರಪೇಟೆ ಠಾಣೆ ಪೊಲೀಸರು 16.60 ಲಕ್ಷ ರೂ. ಬೆಲೆಯ 318 ಗ್ರಾಂ ತೂಕದ ಚಿನ್ನದ ಆಭರಣ 30 ಸಾವಿರ ರೂ. ನಗದು ಮತ್ತು ಒಂದು ನಿಕೋನ್ ಕ್ಯಾಮೆರಾವನ್ನು ವಶಪಡಿಸಿಕೊಂಡಿದ್ದಾರೆ.

ಈ ಆರೋಪಿಗಳ ಬಂಧನದಿಂದ ಉಪ್ಪಾರಪೇಟೆ ಠಾಣೆ 2 ಕಳವು ಪ್ರಕರಣ, 1 ಕನ್ನ ಕಳವು ಪ್ರಕರಣ, 1 ವಂಚನೆ ಪ್ರಕರಣ, ಕಾಟನ್ ಪೇಟೆ ಠಾಣೆಯ 2 ಕಳವು ಪ್ರಕರಣಗಳು, ಕೆಂಗೇರಿ ಠಾಣೆಯು 2 ಮನೆ ಕಳವು ಪ್ರಕರಣಗಳು, ಬ್ಯಾಟರಾಯನಪುರ ಹಾಗೂ ವಿಜಯನಗರ ಠಾಣೆಯ ತಲಾ ಒಂದೊಂದು ಕಳವು ಪ್ರಕರಣಗಳು ಸೇರಿ ಒಟ್ಟು 10 ಪ್ರಕರಣಗಳನ್ನು ಬೆಳಕಿಗೆ ಬಂದಿವೆ.

ಬಂತರಲ್ಲಿ ಅಪ್ರೋಜ್ ವಿರುದ್ಧ ಶೇಷಾದ್ರಿಪುರಂ ಠಾಣೆಯಲ್ಲಿ ಹಾಗೂ ರವಿ ಎಂಬಾತನ ವಿರುದ್ಧ ಮಡಿವಾಳ ಠಾಣೆಯಲ್ಲಿ ದರೋಡೆಗೆ ಸಂಚು ಪ್ರಕರಣಗಳು ದಾಖಲಾಗಿವೆ.

Facebook Comments