ಪೊಲೀಸ್ ಪರೀಕ್ಷೆ ಬರೆಯುವ ಅಕ್ರಮ ಜಾಲ, ಇಬ್ಬರ ಬಂಧನ..

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.23- ವಿಶೇಷ ಮೀಸಲು ಪೊಲೀಸ್ ಕಾನ್‍ಸ್ಟೆಬಲ್ ಹುದ್ದೆಗೆ ನಡೆದ ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಬದಲಿಗೆ ಪರೀಕ್ಷೆ ಬರೆಯುತ್ತಿದ್ದ ಇಬ್ಬರು ನಕಲಿ ಅಭ್ಯರ್ಥಿಗಳನ್ನು ಪೂರ್ವ ವಿಭಾಗದ ಪೊಲೀಸರು ಬಂಸಿದ್ದಾರೆ. ಈ ಬಗ್ಗೆ ಇಂದಿರಾನಗರ ಮತ್ತು ಜೀವನ್‍ಭೀಮಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಮೂಲತಃ ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಲೋಳಸೂರು ಗ್ರಾಮದ ಗುರುನಾಥ್ ವಡ್ಡರ್(20) ಮತ್ತು ಮಾಲದಿನ್ನಿ ಗ್ರಾಮದ ಮಹಾಂತೇಶ್ ನಂದಿ(24) ಎಂಬುವರನ್ನು ಪರೀಕ್ಷಾ ಉಸ್ತುವಾರಿ ಅಕಾರಿಗಳು ಹಾಗೂ ಸಿಬ್ಬಂದಿ ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಒಂದು ಪ್ರಕರಣದಲ್ಲಿ ಇಂದಿರಾನಗರ ಠಾಣೆ ವ್ಯಾಪ್ತಿಯ ಕೈರಳಿನಿಕೇತನ್ ಟ್ರಸ್ಟ್‍ನಲ್ಲಿ ನಡೆಯುತ್ತಿದ್ದ ಕೆಎಸ್‍ಆರ್‍ಪಿ ಹುದ್ದೆಗಳ ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿ ಸಾಗರ್ ವಡ್ಡರ್ ಪರವಾಗಿ ಬೇರೊಬ್ಬ ವ್ಯಕ್ತಿ ಪರೀಕ್ಷೆ ಬರೆಯಲು ಹಾಜರಾಗಿದ್ದಾನೆ ಎಂಬ ಮಾಹಿತಿ ಮೇಲಾಕಾರಿಗಳ ಕಚೇರಿಯಿಂದ ಬಂದಿದೆ.

ಈ ಬಗ್ಗೆ ಪರೀಕ್ಷಾ ಉಸ್ತುವಾರಿ ಅಕಾರಿ ಪರಿಶೀಲಿಸಿದಾಗ ಸಾಗರ್ ವಡ್ಡರ್ ಬದಲಾಗಿ ಗುರುನಾಥ್ ವಡ್ಡರ್ ಪರೀಕ್ಷೆ ಬರೆಯಲು ಹಾಜರಾಗಿರುವುದು ದೃಢಪಟ್ಟಿರುತ್ತದೆ. ತಕ್ಷಣ ಈತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಸಾಗರ್ ವಡ್ಡರ್ ನನ್ನ ಸ್ನೇಹಿತ ರಾಮು ಎಂಬುವನ ಗೆಳೆಯ. ರಾಮು ನೀಡಿದ ಸೂಚನೆ ಮೇರೆಗೆ ನಾನು ಪರೀಕ್ಷೆ ಬರೆಯಲು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾನೆ.

ಪರೀಕ್ಷೆಗೆ ಹಾಜರಾಗುವ ನಿಟ್ಟಿನಲ್ಲಿ ಸಾಗರ್ ವಡ್ಡರ್ ಹೆಸರಿನಲ್ಲಿ ರಾಮು ನಕಲಿ ಆಧಾರ್ ಕಾರ್ಡ್ ತಯಾರಿಸಿ ನೀಡಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಹಿಂದೆ ಅನೇಕ ಪೊಲೀಸ್ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಬರೆದಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿರುವುದಾಗಿ ವಿಚಾರಣೆ ವೇಳೆ ಗುರುನಾಥ್ ವಡ್ಡರ್ ತಿಳಿಸಿದ್ದಾನೆ.

ಈತನಿಗೆ ಸಹಕರಿಸಿದ ಉಳಿದ ಆರೋಪಿಗಳಿಗಾಗಿ ಪತ್ತೆ ಕಾರ್ಯ ಮುಂದುವರೆದಿದೆ. ಮತ್ತೊಂದು ಪ್ರಕರಣದಲ್ಲಿ ಜೀವನ್‍ಭೀಮಾನಗರ ವ್ಯಾಪ್ತಿಯ ಸೇಕ್ರೆಡ್‍ಹಾರ್ಟ್ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆಯುತ್ತಿದ್ದ ಕೆಎಸ್‍ಆರ್‍ಪಿ ಹುದ್ದೆಗಳ ಲಿಖಿತ ಪರೀಕ್ಷೆಗೆ 400 ಮಂದಿ ಹಾಜರಾಗಿದ್ದರು. ಈ ಪರೀಕ್ಷಾ ಕೇಂದ್ರದಲ್ಲಿ ಸಿದ್ದಾರೂಢ ವೈ.ಬನಾಜ್ ಎಂಬ ಅಭ್ಯರ್ಥಿ ಬದಲಾಗಿ ಮಹಾಂತೇಶ್ ನಂದಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಪರೀಕ್ಷೆ ಬರೆಯುತ್ತಿದ್ದಾನೆ ಎಂಬ ಮಾಹಿತಿ ಮೇರೆಗೆ ಪರೀಕ್ಷಾ ಅಕಾರಿಗಳು ಪರಿಶೀಲಿಸಿದಾಗ ಈತ ನಕಲಿ ಅಭ್ಯರ್ಥಿ ಎಂಬುದು ಗೊತ್ತಾಗಿದೆ.

ಸಿದ್ದಾರೂಢ ಹೆಸರಿನಲ್ಲಿ ಪರೀಕ್ಷೆ ಬರೆದು ಸರ್ಕಾರಿ ಕೆಲಸವನ್ನು ಬೇರೊಬ್ಬರಿಗೆ ಕೊಡಿಸುವ ದುರದ್ದೇಶ ಹೊಂದಿದ್ದ ಮಹಾಂತೇಶ್ ನಂದಿಯನ್ನು ವಶಕ್ಕೆ ಪಡೆದು ಉಳಿದ ಆರೋಪಿಗಳಿಗಾಗಿ ಪತ್ತೆ ಕಾರ್ಯ ಮುಂದುವರೆದಿದೆ.

ರಾಜ್ಯಾದ್ಯಂತ ಇದೇ ರೀತಿ ಬೇರೆ ಅಭ್ಯರ್ಥಿಗಳ ಹೆಸರಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಇಬ್ಬರು ಕಾನ್‍ಸ್ಟೆಬಲ್ ಸೇರಿದಂತೆ ಏಳು ಮಂದಿಯನ್ನು ಬಂಸಲಾಗಿದೆ.

Facebook Comments