ದ್ವಿಚಕ್ರ ವಾಹನ ಕಳ್ಳತನ: ಆರೋಪಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.26- ದ್ವಿಚಕ್ರವಾಹನ ಕಳವು ಮಾಡುತ್ತಿದ್ದ ಆರೋಪಿಯನ್ನು ಉತ್ತರ ವಿಭಾಗದ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಬಂಸಿಧಿ 2 ಲಕ್ಷ ರೂ. ಬೆಲೆ ಬಾಳುವ 5 ವಿವಿಧ ಕಂಪನಿಯ ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ವಿಜಯಕುಮಾರ್ ಅಯ್ಯರ್(35) ಬಂತ ಆರೋಪಿ. ಈತನ ಬಂಧನದಿಂದ ಸುಬ್ರಹ್ಮಣ್ಯನಗರ, ಕೋಣನಕುಂಟೆ ಸೇರಿದಂತೆ ಐದು ದ್ವಿಚಕ್ರವಾಹನ ಪ್ರಕರಣಗಳಲ್ಲಿ 2 ಪ್ರಕರಣಗಳು ಪತ್ತೆಯಾಗಿದ್ದು, ಉಳಿದ ಮೂರು ವಾಹನಗಳ ವಾರಸುದಾರರ ಪತ್ತೆಕಾರ್ಯ ಮುಂದುವರೆದಿದೆ.

ನ.19ರಂದು ಸಂಜೆ 6 ಗಂಟೆಯಲ್ಲಿ ಗಾಯತ್ರಿನಗರದ ಅನಿಲ್‍ಕುಮಾರ್(23) ಎಂಬುವರು ತಮ್ಮ ಮನೆ ಮುಂದೆ ಹೊಂಡಾ ಆ್ಯಕ್ಟಿವಾ ಸ್ಕೂಟರ್‍ನ್ನು ನಿಲ್ಲಿಸಿದ್ದರು. ಕೆಲ ಸಮಯದ ಬಳಿಕ ನೋಡಿದಾಗ ಸ್ಕೂಟರ್ ನಾಪತ್ರೆಯಾಗಿತ್ತು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದರು. 24ರಂದು ಸಂಜೆ ಸುಮಾರು 5.30ರ ಸುಮಾರಿನಲ್ಲಿ ಕ್ರೈಂ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಈ ವೇಳೆ ಹರಿಶ್ಚಂದ್ರ ಘಾಟ್ ಬಸ್ ನಿಲ್ದಾಣದ ಬಳಿ ಅನುಮಾನಸ್ಪದವಾಗಿ ದ್ವಿಚಕ್ರವಾಹನದಲ್ಲಿ ಬಂದ ಈತನನ್ನು ವಾಹನದ ದಾಖಲಾತಿಗಳನ್ನು ನೀಡಲು ಸೂಚಿಸಿದಾಗ, ಆರೋಪಿ ಬಳಿ ಯಾವುದೇ ದಾಖಲಾತಿಗಳು ಇಲ್ಲದಿರುವುದು ಗಮನಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಈತ ವಾಹನ ಕಳವು ಮಾಡಿರುವುದು ತಿಳಿದುಬಂದಿದೆ.

Facebook Comments