ಆಗ್ನೇಯ ವಿಭಾಗದ ಪೊಲೀಸರ ಕಾರ್ಯಾಚರಣೆ : 1.68 ಕೋಟಿ ಮೌಲ್ಯದ ಮಾಲು ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.3- ನಗರದ ಆಗ್ನೇಯ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರಾಜ್ಯ ಮತ್ತು ಅಂತಾರಾಜ್ಯದ 10 ಮಂದಿ ಆರೋಪಿಗಳನ್ನು ಬಂಧಿಸಿ 59 ಪ್ರಕರಣಗಳನ್ನು ಪತ್ತೆಹಚ್ಚಿ 1.68 ಕೋಟಿ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಿಂದ 800 ಗ್ರಾಂ ಚಿನ್ನಾಭರಣ, 2.50 ಲಕ್ಷ ನಗದು, 15 ನಾಲ್ಕು ಚಕ್ರದ ವಾಹನಗಳು, 49 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. 59 ಪ್ರಕರಣಗಳಲ್ಲಿ ಬೊಮ್ಮನ ಹಳ್ಳಿ ಠಾಣೆ ಪೊಲೀಸರು 13 ಪ್ರಕರಣ, ಮಡಿವಾಳ ಪೊಲೀಸರು 14, ಆಡುಗೋಡಿ 13, ಪರಪ್ಪನ ಅಗ್ರಹಾರ 9 ಮತ್ತು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಒಂದು ಪ್ರಕರಣವನ್ನು ಪತ್ತೆಹಚ್ಚಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ: ಬಸ್ಸಿನಲ್ಲಿ ಪ್ರಯಾಣಿಕರ ಗಮನಸೆಳೆದು ಬ್ಯಾಗ್‍ಗಳಿಂದ ಚಿನ್ನಾಭರಣ ಮತ್ತು ಹಣ ಕಳ್ಳತನ ಮಾಡುತ್ತಿದ್ದ 10 ಪ್ರಕರಣವನ್ನು ಪತ್ತೆಹಚ್ಚಿ ತಮಿಳುನಾಡಿನ ಶಬರಿ , ಬಾಲಾಜಿ, ಸುಭಾಷ್‍ನನ್ನು ಬಂಧಿಸಿ 2.50 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡು 10 ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ.

ಮಡಿವಾಳ: ದ್ವಿಚಕ್ರವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಕೇರಳ ಮೂಲದ ಜೋಸಿನ್, ಸಿಮ್‍ಜಿತ್‍ನನ್ನು ಬಂಧಿಸಿ 10 ದ್ವಿಚಕ್ರ ವಾಹನ ಕಳ್ಳತನ ಪತ್ತೆಹಚ್ಚಿ 12 ಲಕ್ಷ ರೂ. ಮೌಲ್ಯದ ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಇದೇ ವ್ಯಾಪ್ತಿಯ ಮತ್ತೊಂದು ಪ್ರಕರಣದಲ್ಲಿ ತಮಿಳುನಾಡಿನ ಸೆಲ್ವರಾಜ್ ಎಂಬಾತನನ್ನು ಬಂಧಿಸಿ 10 ಬೈಕ್ ಕಳವು  ಪ್ರಕರಣ ಪತ್ತೆಹಚ್ಚಿ ಮೂರು ಲಕ್ಷ ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿ ದ್ದಾರೆ.

ಪರಪ್ಪನ ಅಗ್ರಹಾರ: ಈ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದ ದೀಪಕ್ ಮತ್ತು ಸುಹೇಲ್ ಎಂಬಾತನನ್ನು ಬಂಧಿಸಿ 12 ಲಕ್ಷ ರೂ. ಮೌಲ್ಯದ 11
ಬೈಕ್‍ಗಳನ್ನು ವಶಪಡಿಸಿಕೊಂಡಿ ದ್ದಾರೆ.

Facebook Comments