ಆನೆ ದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.20- ಗೋಣಿಚೀಲದೊಳಗೆ ಆನೆ ದಂತಗಳನ್ನು ಇಟ್ಟುಕೊಂಡು ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ತಮಿಳುನಾಡು ಮೂಲದ ನಾಲ್ವರನ್ನು ಜಾಲಹಳ್ಳಿ ಠಾಣೆ ಪೊಲೀಸರು ಬಂಧಿಸಿ 8 ಆನೆದಂತಗಳನ್ನು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡಿನ ಕೊಯಂಬತ್ತೂರಿನ ಮೆಟುಪಾಳ್ಯಂನ ಉನ್ನೀಕೃಷ್ಣನ್(35), ಆನಗಪುತ್ತೂರಿನ ಜಯಶೀಲನ್(38), ಸೇಲಂನ ಶಂಕರಿ ತಾಲ್ಲೂಕಿನ ಮಾದೇಶ್ವರನ್(59) ಮತ್ತು ಪೆರಂಬದೂರಿನ ವಿಜಯ್(37) ಬಂಧಿತರು.

ಜಾಲಹಳ್ಳಿ ವ್ಯಾಪ್ತಿಯ ಕಾಳಿಂಗರಾವ್ ಸರ್ಕಲ್ ಸಮೀಪ ಇಬ್ಬರು ವ್ಯಕ್ತಿಗಳು ಗೋಣಿಚೀಲದೊಳಗೆ ಆನೆ ದಂತಗಳನ್ನಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಪಿಎಸ್‍ಐ ಲೇಪಾಕ್ಷಿ ಮೂರ್ತಿ ಹಾಗೂ ಸಿಬ್ಬಂದಿಯವರಿಗೆ ಲಬಿಸಿದೆ.

ಈ ಮಾಹಿತಿ ಆಧರಿಸಿ ಯಶವಂತಪುರ ಉಪವಿಭಾಗದ ಎಸಿಪಿ ಶ್ರೀನಿವಾಸ್ ರೆಡ್ಡಿ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್ ಯಶವಂತ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ಕೈಗೊಂಡು ಉನ್ನೀಕೃಷ್ಣನ್ ಮತ್ತು ಜಯಶೀಲನ್‍ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ತಮಗೆ ಮಾದೇಶ್ವರನ್ ಮತ್ತು ವಿಜಯ್ ಆನೆ ದಂತಗಳನ್ನು ಮಾರಾಟ ಮಾಡಲು ಕೊಡುತ್ತಿದುದಾಗಿ ತಿಳಿಸಿದ್ದಾರೆ. ಈ ಮಾಹಿತಿ ಆಧರಿಸಿ ಈ ಇಬ್ಬರನ್ನು ಸಹ ಜಾಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Facebook Comments