ಪೂಜೆ ನೆಪದಲ್ಲಿ ಸಾರ್ವಜನಿಕರಿಂದ ಹಣ-ಆಭರಣ ದೋಚಿದ್ದ ಆಂಧ್ರದ ಇಬ್ಬರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.26- ಸಾರ್ವಜನಿಕರಿಗೆ ನಿಮ್ಮ ಮನೆಯಲ್ಲಿ ದೋಷವಿದ್ದು, ಅದರಿಂದ ಗಂಡಾಂತರವಾಗಲಿದೆ ಅಲ್ಲದೆ ನಿಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆಯಿದೆ ಎಂದು ಅವರನ್ನು ಇನ್ನಷ್ಟು ಹೆದರಿಸಿ ದೋಷಕ್ಕೆ ಪರಿಹಾರ ಮಾಡಿ ಕೊಡುತ್ತೇನೆಂದು ಹೇಳಿ ಹಣ,ಆಭರಣವನ್ನು ದೋಚಿದ್ದ ಆಂಧ್ರಪ್ರದೇಶ ಮೂಲದ ಇಬ್ಬರನ್ನು ವಿವಿಪುರಂ ಠಾಣೆ ಪೊಲೀಸರು ಬಂಧಿಸಿ 63ಲಕ್ಷ ರೂ. ಮೌಲ್ಯದ ಮಾಲನ್ನು ವಶ ಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ಅಧೋನಿ ತಾಲೂಕಿನ ಚೇತನ್ ಚಂದ್ರಕಾಂತ್ ಧಾಗೆ (37) ಮತ್ತು ರಾಜೇಶ್ ಗಣಪತ್ ರಾವ್ ಥಾಂಬೆ (55) ಎಂಬಾತನನ್ನು ಬಂಧಿಸಲಾಗಿದೆ. ಇವರಿಬ್ಬರು ಮಹಾರಾಷ್ಟ್ರದ ಪೂನಾ ನಿವಾಸಿ ಅವಿನಾಶ್ ಸುರೇಶ್ ಕಾನ್‍ವಿಲ್ಕರ್ ಅಲಿಯಾಸ್ ಗುರೂಜಿ ಎಂಬಾತನೊಂದಿಗೆ ಸೇರಿಕೊಂಡು ನಗರದ ವಿವಿಧ ಕಡೆಗಳಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿದ್ದರು.

ವಿವಿಪುರಂ ಉಪವಿಭಾಗದ ಠಾಣಾ ಸರಹದ್ದಿನಲ್ಲಿ ಕೆಲವು ಮನೆಗಳಿಗೆ ಹೋಗಿ ನಿಮ್ಮ ಮನೆಯಲ್ಲಿ ದೋಷವಿದೆ. ನಿಮಗೆ ಗಂಡಾಂತರವಿದೆ, ಆರೋಗ್ಯದಲ್ಲಿ ಸಮಸ್ಯೆ ಕಾಣುತ್ತಿದೆ, ಇವುಗಳ ಪರಿಹಾರಕ್ಕೆ ಪೂಜೆ, ಹೋಮ-ಹವನ ಮಾಡಿಕೊಡುತ್ತೇನೆಂದು ಸಾರ್ವಜನಿಕರನ್ನು ನಂಬಿಸುತ್ತಿದ್ದರು.

ಇವರ ಮಾತನ್ನು ನಂಬಿದ ಸಾರ್ವಜನಿಕರು ತಮ್ಮ ಮನೆಗಳಿಗೆ ಕರೆಸಿ ಪೂಜೆ ಮಾಡಿಸುತ್ತಿದ್ದರು. ಈ ವೇಳೆ ಬಂಗಾರದ ಒಡವೆಗಳನ್ನು ಪೂಜೆ ಮಾಡಿ ವಾಪಸ್ ತಂದು ಕೊಡುವುದಾಗಿ ಹೇಳಿ ಸಾರ್ವಜನಿಕರನ್ನು ವಂಚಿಸಿ ಹಣ ಮತ್ತು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಬಗ್ಗೆ ವಿವಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿವಿಪುರಂ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ವಲಿ ಬಾಷ ಅವರ ಅಪರಾಧ ಪತ್ತೆದಳ ಮತ್ತು ಇನ್ಸ್ ಪೆಕ್ಟರ್ ಶಿವಶಂಕರ ನೇತೃತ್ವದಲ್ಲಿ ಸಿಬ್ಬಂದಿ ವರ್ಗ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ವಿವಿಪುರಂ ಸಜ್ಜನರಾವ್ ಸರ್ಕಲ್‍ನಲ್ಲಿ ಚೇತನ್ ಮತ್ತು ರಾಜೇಶ್ ಎಂಬಿಬ್ಬರನ್ನು ಬಂಧಿಸಿದ್ದಾರೆ.

ಈ ಆರೋಪಿಗಳು ಕದ್ದ ಮಾಲನ್ನು ನಗರದ ವಿವಿಧ ಕಡೆಗಳಲ್ಲಿರುವ ಮಣಿಪುರಂ ಫೈನಾನ್ಸ ಸೇರಿದಂತೆ ಗಿರವಿ ಅಂಗಡಿಗಳಲ್ಲಿ ಇಟ್ಟಿದ್ದ ವಿವಿಧ ಮಾದರಿಯ ಸುಮಾರು 925ಗ್ರಾಂ ತೂಕದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ವಿರುದ್ಧ ಚನ್ನಮ್ಮನಕೆರೆ ಅಚ್ಚುಕಟ್ಟು ಪೆÇಲೀಸ್ ಠಾಣೆಯಲ್ಲಿ ಎರಡು ಪ್ರಕರಣ, ಗಿರಿನಗರ ಹಾಗೂ ಸುಬ್ರಮಣ್ಯಪುರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ