ಕೊಲೆ ಪ್ರಕರಣ ತಿರುಚಲು ಶಾರ್ಟ್‍ ಸಕ್ರ್ಯೂಟ್‍ ಎಂದು ಬಿಂಬಿಸಿದ್ದರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.19- ಸಗಟು ಬಟ್ಟೆ ವ್ಯಾಪಾರಿ ಜೈಕುಮಾರ್ ಜೈನ್ ಅವರನ್ನು ಕೊಲೆ ಮಾಡಿದ ಅವರ ಪುತ್ರಿ ಹಾಗೂ ಆಕೆಯ ಆತ್ಮೀಯ ಸ್ನೇಹಿತ ಇಡೀ ಘಟನೆಯನ್ನು ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಆಗಿದೆ ಎಂದು ಬಿಂಬಿಸಲು ಯತ್ನಿಸಿದರು ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಇಬ್ಬರ ಸ್ನೇಹಕ್ಕೆ ಅಡ್ಡಿಪಡಿಸುತ್ತಿದ್ದುದ್ದನ್ನು ಜೈಕುಮಾರ್ ಪುತ್ರಿಯೇ ತನ್ನ ಸ್ನೇಹಿತ ಪ್ರವೀಣ್ ಜೊತೆ ಹೇಳಿಕೊಂಡಿದ್ದಳು. ನಂತರ ಇಬ್ಬರೂ ಸೇರಿ ಈ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ವಿವರಿಸಿದರು.

ಆರೋಪಿ ಪ್ರವೀಣ್ ಈ ಮನೆಗೆ ಬರುವ ಮುನ್ನ ಚಾಕುವೊಂದನ್ನು ತಂದಿದ್ದ. ಅಡುಗೆ ಮನೆಯಲ್ಲಿದ್ದ ಚಾಕುವನ್ನು ಆಕೆ ತೆಗೆದುಕೊಂಡು ಇಬ್ಬರೂ ಸೇರಿ ಮನಬಂದಂತೆ ಇರಿದು, ಕತ್ತು ಕೊಯ್ದು ಕೊಲೆ ಮಾಡಿದ್ದಾರೆ. ಕೊಲೆಗೆ ಉಪಯೋಗಿಸಿದ್ದ ಎರಡೂ ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೋಷಕರು ಆಕೆಯಿಂದ ಮೊಬೈಲ್ ಕಸಿದುಕೊಂಡ ನಂತರ ಪ್ರವೀಣ್‍ನನೇ ಆಕೆಗೆ ಹೊಸ ಮೊಬೈಲ್‍ವೊಂದನ್ನು ಕೊಡಿಸಿದ್ದ. ಪೋಷಕರಿಗೆ ಗೊತ್ತಿಲ್ಲದಂತೆ ರಾತ್ರಿ ವೇಳೆ ಕದ್ದು ಮುಚ್ಚಿ ಪ್ರವೀಣ್ ಜೊತೆ ಆಕೆ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದುದು ತಿಳಿದುಬಂದಿದೆ ಎಂದು ಅವರು ವಿವರಿಸಿದರು.

ಪ್ರವೀಣ್ ಮತ್ತು ಆತನ ಸ್ನೇಹಿತೆ ಇಬ್ಬರೂ ಒಂದೇ ಶಾಲೆಯಲ್ಲಿ ಓದುತ್ತಿದ್ದಾಗ ಇವರಿಬ್ಬರ ನಡುವೆ ಸ್ನೇಹ ಉಂಟಾಗಿದೆ. ಶಾಲೆ ಮತ್ತು ಟ್ಯೂಷನ್‍ಗೆ ಹೋಗುವಾಗ ಭೇಟಿ ಮಾಡಿ ಮಾತನಾಡುತ್ತಿದ್ದರು.  ಪ್ರವೀಣ್ ಪ್ರತಿಷ್ಠಿತ ಕುಟುಂಬದವನಾಗಿದ್ದು, ಅವರ ತಂದೆ-ತಾಯಿ ಸುಸಂಸ್ಕøತರು. ಮಗನ ಈ ವಿಚಾರ ಅವರಿಗೆ ತಿಳಿದಿರಲಿಲ್ಲ ಎಂದು ಡಿಸಿಪಿ ಅವರು ತಿಳಿಸಿದರು. ಆರೋಪಿ ಪ್ರವೀಣ್‍ನನ್ನು ಬಂಧಿಸಿ ಮುಂದಿನ ವಿಚಾರಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

Facebook Comments