ದಕ್ಷಿಣ ವಿಭಾಗ ಪೊಲೀಸರ ಭರ್ಜರಿ ಕಾರ್ಯಾಚರಣೆ : 5.17 ಕೋಟಿ ರೂ. ಮೌಲ್ಯದ ಮಾಲು ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.1- ನಗರ ದಕ್ಷಿಣ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 229 ಆರೋಪಿಗಳನ್ನು ಬಂಧಿಸಿ 342 ಪ್ರಕರಣಗಳನ್ನು ಪತ್ತೆ ಮಾಡಿ 5.17 ಕೋಟಿ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡಿರುವ ಮಾಲುಗಳ ಪೈಕಿ 2, 62,97,500ರೂ.ಬೆಲೆಯ 8ಕೆಜಿ 749.9 ಗ್ರಾಂ ತೂಕದ ಚಿನ್ನದ ಆಭರಣಗಳು,

1.23 ಲಕ್ಷ ರೂ. ಬೆಲೆಯ 25ಕೆಜಿ 525 ಗ್ರಾಂ ತೂಕದ ಬೆಳ್ಳಿ ಸಾಮಾನುಗಳು, 1.13 ಕೋಟಿ ಮೌಲ್ಯದ 155 ದ್ವಿಚಕ್ರ ವಾಹನಗಳು, 6.14 ಲಕ್ಷ ಬೆಲೆಯ 27 ಮೂರು ಚಕ್ರದ ವಾಹನಗಳು, 2.20 ಲಕ್ಷ ಬೆಲೆಬಾಳುವ 2.5 ಕ್ಯಾರೆಟ್ ವಜ್ರಾಭರಣ, 46 ಲಕ್ಷ ಮೌಲ್ಯದ 10 ನಾಲ್ಕು ಚಕ್ರದ ವಾಹನಗಳು, 12.91 ಲಕ್ಷ ಬೆಲೆ ಬಾಳುವ 122 ಮೊಬೈಲ್ ಫೋನ್‍ಗಳು, 26.90 ಲಕ್ಷ ಬೆಲೆಯ 54 ಲ್ಯಾಪ್‍ಟಾಪ್, 87 ಲಕ್ಷ ಬೆಲೆಯ 10 ಕೆಜಿ, 130 ಗ್ರಾಂ ಗಾಂಜಾ ಹಾಗೂ 23.85 ಲಕ್ಷ ರೂ. ನಗದು ಸೇರಿದೆ.

ಬಂಧಿತರಾಗಿರುವ 70 ಮಂದಿ ದರೋಡೆಕೋರರಿಂದ 32 ಪ್ರಕರಣ ಬೆಳಕಿಗೆ ಬಂದಿದ್ದು, 17 ಮಂದಿ ಸರಗಳ್ಳರಿಂದ 43 ಪ್ರಕರಣ ಬೆಳಕಿಗೆ ಬಂದಿವೆ. 58 ಮಂದಿ ವಾಹನ ಕಳ್ಳರನ್ನು ಬಂಧಿಸಿ 110 ಪ್ರಕರಣಗಳನ್ನು ಬಯಲಿಗೆಳೆದಿದ್ದರೆ ಆರು ಮಂದಿಯನ್ನು ಬಂಧಿಸಿ 14 ಮೊಬೈಲ್ ಪ್ರಕರಣ ಮತ್ತು 7 ಮಂದಿಯನ್ನು ಬಂಧಿಸಿ 5 ಗಾಂಜಾ ಪ್ರಕರಣ ಹಾಗೂ 40 ಮಂದಿಯನ್ನು ಬಂಧಿಸಿ 77 ಇತರೆ ಕಳ್ಳತನ ಪ್ರಕರಣಗಳನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

ಆರೋಪಿಗಳ ಬಂಧನದಿಂದ ದಕ್ಷಿಣ ವಿಭಾಗದ ಬನಶಂಕರಿ ಪೊಲೀಸ್ ಠಾಣೆಯ 10 ಪ್ರಕರಣ, ಬಸವನಗುಡಿ 37 ಪ್ರಕರಣ, ಜೆಪಿ ನಗರ 17, ಜಯನಗರ 27, ಸಿದ್ದಾಪುರ 11, ಕೋಣನಕುಂಟೆ 14, ಕುಮಾರಸ್ವಾಮಿ ಲೇಔಟ್ 24, ಪುಟ್ಟೇನಹಳ್ಳಿ 21, ಸುಬ್ರಹ್ಮಣ್ಯಪುರ ಠಾಣೆಯ 50 ಪ್ರಕರಣಗಳು ಬೆಳಕಿಗೆ ಬಂದಿವೆ.

ಅಲ್ಲದೆ, ತಲಘಟ್ಟಪುರ 2 ಪ್ರಕರಣ, ವಿವಿ ಪುರಂ 19, ಕೆಂಪೇಗೌಡ ನಗರ 19 ಪ್ರಕರಣಗಳು, ಸಿಕೆ ಅಚ್ಚುಕಟ್ಟು 15 ಪ್ರಕರಣ, ಗಿರಿನಗರ 43 ಪ್ರಕರಣ, ಶಂಕರಪುರ 13 ಪ್ರಕರಣ ಮತ್ತು ಹನುಮಂತನಗರ ಠಾಣೆಯ 20 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.

ದಕ್ಷಿಣ ವಿಭಾಗದ ಪೊಲೀಸ್ ಠಾಣೆಗಳ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು, ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯ ಶ್ಲಾಘನೀಯವಾಗಿದೆ.

 

Facebook Comments