ತೂಕ ಕಡಿಮೆ, ಸೌಂದರ್ಯ ಹೆಚ್ಚಿಸುವುದಾಗಿ ವಂಚನೆ : ದಂಪತಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಅ.16- ಸ್ಲಿಮ್ ಕೇರ್ ಹಾಗೂ ಕಲರ್ಸ್ (ಕಡಿಮೆ ತೂಕ ಹಾಗೂ ಸೌಂದರ್ಯ ಕ್ಲಿನಿಕ್)ನಲ್ಲಿ ಪಾಲುದಾರರನ್ನಾಗಿ ಮಾಡಿಕೊಳ್ಳುವುದಾಗಿ ನಂಬಿಸಿ ಗ್ರಾಹಕರನ್ನು ವಂಚಿಸಿದ್ದ ಬೆಂಗಳೂರು ಮೂಲದ ದಂಪತಿಯನ್ನು ಇಲ್ಲಿನ ಹೊಸಬಡಾವಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಕಮ್ಮನಹಳ್ಳಿ ಕುಲ್ಲಪ್ಪ ಸರ್ಕಲ್ ನಿವಾಸಿ ಅಶ್ವಿನಿ (30) ಮತ್ತು ಪ್ರಭಾಕರನ್ (43) ಬಂಧಿತರು.

ಹೊಸಬಡಾವಣೆ ಠಾಣೆ ವ್ಯಾಪ್ತಿಯ ಎಸ್‍ಐಟಿಹಿಂಭಾಗದ ಗೇಟ್‍ನಲ್ಲಿ ಡಾಕ್ಟರ್ ಡರ್ಮಾಟಾಲಜಿಸ್, ವಿ3 ಸ್ಲಿಮ್ ಕೇರ್ ಕ್ಲಿನಿಕ್‍ನ್ನು ಈ ದಂಪತಿ ನಡೆಸುತ್ತಿದ್ದರು. ತುಮಕೂರು ಗಾಂಧಿನಗರ ವಾಸಿಯಾದ ಜಗದಾಂಬ ಎಂಬುವರನ್ನು ಪರಿಚಯ ಮಾಡಿಕೊಂಡ ಇವರು ಕ್ಲಿನಿಕ್‍ಗೆ ಪಾಲುದಾರರನ್ನಾಗಿ ಮಾಡಿಕೊಳ್ಳುವುದಾಗಿ ನಂಬಿಸಿ ಅವರಿಂದ 20ಲಕ್ಷ ರೂ. ಪಡೆದು ನಂತರ ಹಣ ವಾಪಸ್ ಹಿಂತಿರುಗಿಸದೆ ವಂಚಿಸಿದ್ದರು.

ಈ ಬಗ್ಗೆ ಹೊಸ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ತಿಲಕಪಾರ್ಕ್ ವೃತ್ತ ನಿರೀಕ್ಷಕರಾದ ಪಾರ್ವವತಮ್ಮ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತುತ.ಈ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಎಚ್ಚರಿಕೆ ವಹಿಸಿ: ಯಾರೆ ಆದರೂ ತಮ್ಮೊಂದಿಗೆ ಬೇರೆಯವರನ್ನು ಹಣದ ವ್ಯವಹಾರ ನಡೆಸುವಾಗ ಎಚ್ಚರಿಕೆ ವಹಿಸಿದರೆ ಮೋಸ ಹೋಗುವುದು ತಪ್ಪುತ್ತದೆ ಎಂದು ಪೊಲೀಸರು ಸೂಚಿಸಿದ್ದಾರೆ.

Facebook Comments