ವೀಸಾ ಪಾಸ್‍ಪೋರ್ಟ್ ಇಲ್ಲದ ಏಳು ನೈಜೀರಿಯಾ ಪ್ರಜೆಗಳ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, : -ಮಾದಕ ವಸ್ತುಗಳ ಜಾಲದಲ್ಲಿದ್ದ ಏಳು ಮಂದಿ ಅಂತಾರಾಷ್ಟ್ರೀಯ ಆರೋಪಿಗಳು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಮಾಹಿತಿ ಪತ್ತೆಯಾಗಿದೆ. ಸಿಸಿಬಿ ಪೋಲೀಸರು ಕಳೆದ ತಿಂಗಳು ಮಾದಕ ವಸ್ತು ಸಾಗಾಣಿಕೆದಾರರ ಮೇಲೆ ದಾಳಿ ನಡೆಸಿದ್ದರು.  ಆ ಸಂದರ್ಭದಲ್ಲಿ ಏಳು ಮಂದಿ ವಿದೇಶಿ ಪ್ರಜೆಗಳು ಅಕ್ರಮವಾಗಿ ನೆಲೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು.

ಇಂದು ಬೆಳಗ್ಗೆ ಸಿಸಿಬಿ ತಂಡ ದಾಳಿ ನಡೆಸಿ ಪರಿಶೀಲಿಸಿದಾಗ ಏಳು ಮಂದಿ ನೈಜೀರಿಯಾ ಪ್ರಜೆಗಳು ಪಾಸ್‍ಪೋರ್ಟ್ ಮತ್ತು ವೀಸಾ ಇಲ್ಲದೆ ಬೆಂಗಳೂರಿಗೆ ಬಂದಿರುವ ಮಾಹಿತಿ ಪತ್ತೆಯಾಗಿದೆ. ಈ ಬಗ್ಗೆ ವಿದೇಶಿಗರ ಕಾಯ್ದೆ ಆಧರಿಸಿ ಪ್ರಕರಣ ದಾಖಲಾಗಿದ್ದು, ತಪಾಸಣೆ ಮುಂದುವರೆದಿದೆ.

Facebook Comments