ಪಂಗೋಲಿನ್ ಪ್ರಾಣಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.21- ಪಂಗೋಲಿನ್(ಚಿಪ್ಪಂದಿ) ಪ್ರಾಣಿಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆಂಧ್ರ ಹಾಗೂ ಬಳ್ಳಾರಿ ಮೂಲದ ಇಬ್ಬರನ್ನು ಉತ್ತರ ವಿಭಾಗದ ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿಯ ಸಂಡೂರಿನ ಸುರೇಶ್(40) ಮತ್ತು ಆಂಧ್ರದ ರಾಯದುರ್ಗ ತಾಲ್ಲೂಕಿನ ಮಧುಸೂದನ್(30) ಬಂಧಿತ ಆರೋಪಿಗಳಾಗಿದ್ದು, ಇದರಿಂದ ಎರಡು ಪಂಗೋಲಿನ್ ಪ್ರಾಣಿಗಳನ್ನು ವಶಪಡಿಸಿಕೊಂಡಿದ್ದಾರೆ.

ಕೂಲಿನಗರ ಬ್ರಿಡ್ಜ್ ಬಳಿ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಇವರಿಬ್ಬರು ಪ್ಲಾಸ್ಟಿಕ್ ಚೀಲದಲ್ಲಿ ಪಂಗೋಲಿನ್ ಪ್ರಾಣಿಯನ್ನು ತಂದು ಮಾರಾಟ ಮಾಡಲು ಬಂದಿದ್ದಾರೆ ಎಂಬ ಮಾಹಿತಿ ಮೇರೆಗೆ ನಂದಿನಿ ಠಾಣೆಯ ಸಿಬ್ಬಂದಿಗಳಾದ ಉಮೇಶ್, ಸಿದ್ದರಾಮಣ್ಣ ಮತ್ತಿತರರು ದಾಳಿ ಮಾಡಿ ಇವರನ್ನು ಬಂಧಿಸಿ ಪ್ರಾಣಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಸಂಡೂರು ತಾಲ್ಲೂಕಿನ ಕುಮಾರ ಸ್ವಾಮಿ ಗುಡ್ಡದ ಬಳಿ ಇರುವ ಕಾಡಿನಿಂದ ಈ ಪ್ರಾಣಿಯನ್ನು ಹಿಡಿದು ಮಾರಾಟ ಮಾಡಲು ಬೆಂಗಳೂರಿಗೆ ತಂದಿದ್ದಾಗಿ ತಿಳಿಸಿ ದ್ದಾರೆ.

Facebook Comments