5 ವೈದ್ಯ ವಿದ್ಯಾರ್ಥಿಗಳಿಗೆ ಕೊರೊನಾ, ಬಿಎಂಸಿ ಕಾಲೇಜು ಆವರಣದಲ್ಲಿ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.20- ಐದು ವೈದ್ಯ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದರಿಂದ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಆತಂಕ ಎದುರಾಗಿದೆ. ವಿಕ್ಟೋರಿಯಾ ಆಸ್ಪತ್ರೆಯ ಕಂಟ್ರೋಲ್ ರೂಮ್‍ನಲ್ಲಿ ರೋಗಿಗಳ ಎಂಟ್ರಿ ಮತ್ತು ಡಿಸ್ಜಾರ್ಜ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಂಸಿ ಕಾಲೇಜಿನ ಐದು ಪಿಜಿ ವೈದ್ಯ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.

ಬಿಎಂಸಿ ಕಾಲೇಜಿನ ಡೀನ್ ಅವರೊಂದಿಗೂ ಸೋಂಕಿತ ವೈದ್ಯ ವಿದ್ಯಾರ್ಥಿಗಳು ಪ್ರಾಥಮಿಕ ಸಂಪರ್ಕವಿರಿಸಿಕೊಂಡಿದ್ದರು. ಇದೇ ರೀತಿ ಸಾಕಷ್ಟು ವಿದ್ಯಾರ್ಥಿಗಳ ಸಂಪರ್ಕದಲ್ಲೂ ಇದ್ದರು ಎನ್ನಲಾಗಿದೆ. ಹೀಗಾಗಿ ಬಿಎಂಸಿ ಕಾಲೇಜು ಆವರಣದಲ್ಲಿ ಆತಂಕ ಎದುರಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬಿಎಂಸಿ ಡೀನ್ ಡಾ.ಜಯಂತಿ ಹೇಳಿದ್ದಾರೆ.

Facebook Comments