ಬಿಎಂಟಿಸಿ ಪಾಸ್‍ ಪಡೆದ ವಿದ್ಯಾರ್ಥಿಗಳಿಗೆ ಶಾಕಿಂಗ್ ಸುದ್ದಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.18-ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ರಿಯಾಯಿತಿ ದರದ ವಿದ್ಯಾರ್ಥಿ ಪಾಸ್‍ನ್ನು ಅಕ್ರಮವಾಗಿ ನವೀಕರಣ ಮಾಡಿರುವುದನ್ನು ಪತ್ತೆಹಚ್ಚಲಾಗಿದೆ.
ಸೆ.13ರಂದು ಬಸ್‍ಗಳಲ್ಲಿ ತಪಾಸಣೆ ನಡೆಸುವ ಸಂದರ್ಭದಲ್ಲಿ ನಕಲಿ ವಿದ್ಯಾರ್ಥಿ ಬಸ್‍ಪಾಸ್ ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ರಿಯಾಯಿತಿ ಬಸ್ ಪಾಸ್‍ಗಳನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ಬಿಎಂಟಿಸಿಯ ಭದ್ರತೆ ಮತ್ತು ಜಾಗೃತಿ ದಳದ ನಿರ್ದೇಶಕರು ಸೂಚನೆ ನೀಡಿದ್ದಾರೆ. ಕರ್ತವ್ಯನಿರತ ಚಾಲನಾ ಸಿಬ್ಬಂದಿ ನವೀಕರಣಗೊಂಡ ವಿದ್ಯಾರ್ಥಿ ಬಸ್‍ಪಾಸ್‍ಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು.

ಒಂದು ವೇಳೆ ಅಕ್ರಮವಾಗಿ ಆರ್‍ಇಎನ್ 2019-20 ಎಂದು ನಮೂದಿಸಿ ನವೀಕರಣ ಮಾಡಿಕೊಂಡಿರುವ ಪಾಸ್ ಪತ್ತೆಯಾದಲ್ಲಿ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಮೇಲಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದು, ಈ ಮಾಹಿತಿಯನ್ನು ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮತ್ತು ಎಲ್ಲಾ ಘಟಕ ವ್ಯವಸ್ಥಾಪಕರು ತಮ್ಮ ಅಧೀನದ ಸಿಬ್ಬಂದಿಗೆ ಒದಗಿಸಲು ನಿರ್ದೇಶಿಸಿದ್ದಾರೆ.

ಅಕ್ರಮವಾಗಿ ನವೀಕರಿಸಿರುವ ಪಾಸ್ ಪತ್ತೆಯಾದ ಬಗ್ಗೆ ಈಗಾಗಲೇ ಮಹಾಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Facebook Comments