ಮುಷ್ಕರಕ್ಕೆ ಬೆದರದೆ ಬಸ್ ಓಡಿಸಿದ ಸಾರಿಗೆ ನೌಕರರಿಗೆ ಸನ್ಮಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.7- ಮುಷ್ಕರಕ್ಕೆ ಬೆದರದೆ ಬಸ್ ಓಡಿಸಿದ ಬಿಎಂಟಿಸಿ ಡ್ರೈವರ್‍ಗೆ ಕನ್ನಡಪರ ಸಂಘಟನೆಗಳು ಸನ್ಮಾನ ಮಾಡಿದರು. ಸಾರಿಗೆ ನೌಕರರ ಮುಷ್ಕರದ ನಡುವೆ ಮುಷ್ಕರಕ್ಕೆ ಸೊಪ್ಪು ಹಾಕದೆ ಮೆಜಸ್ಟಿಕ್ ಬಸ್ ನಿಲ್ದಾಣದಿಂದ ಚನ್ನಮ್ಮನಕೆರೆ ಅಚ್ಚುಕಟ್ಟಿಗೆ ಬಸ್ ಓಡಾಟ ನಡೆಸಿದ ಡ್ರೈವರ್ ತ್ಯಾಗರಾಜ್ ಅವರನ್ನು ಹೊಟೇಲ್ ಮಾಲೀಕರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಿಂದ ಸನ್ಮಾನ ಮಾಡಲಾಯಿತು.

ಮುಷ್ಕರದ ವೇಳೆ ಬಸ್ ಓಡಿಸಿದರೆ ಚಪ್ಪಲಿ ಹಾರ ಹಾಕುವುದಾಗಿ ಸಾರಿಗೆ ನೌಕರರ ಸಂಘದ ಮುಖಂಡರು ಹೇಳಿದ್ದರು. ಆದರೆ, ಚಾಲಕ ತ್ಯಾಗರಾಜ್ ಅವರು ಮುಖಂಡರ ಮಾತಿಗೆ ಕೇರ್ ಮಾಡದೆ ಇಂದು ಬೆಳಗ್ಗೆ ಬಿಎಂಟಿಸಿ ಬಸ್ ರಸ್ತೆಗಿಳಿಸಿದರು. ಲಾಕ್‍ಡೌನ್ ಸಂದರ್ಭದಲ್ಲಿ ಮೂರು ತಿಂಗಳು ನಮ್ಮನ್ನು ಮನೆಯಲ್ಲಿ ಕೂರಿಸಿ ಸಂಬಳ ಕೊಟ್ಟಿದ್ದಾರೆ. ಈಗ ನಾವು ಪ್ರತಿಭಟನೆ ಮಾಡುವುದು ಎಷ್ಟು ಸರಿ. ಸರ್ಕಾರಕ್ಕೆ ನಾವೂ ಸ್ಪಂದಿಸಬೇಕು. ನನಗೆ ಏನೇ ಆದರೂ ಪರವಾಗಿಲ್ಲ, ನಾನು ಬಸ್ ಓಡಿಸುತ್ತೇನೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಅವರಿಗೆ ಹಾರ, ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. ಇನ್ನು ಹಲವೆಡೆ ಮುಷ್ಕರದ ನಡುವೆಯೇ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದೇವೆ. ನಾವು ಮುಷ್ಕರಕ್ಕೆ ಬೆಂಬಲ ನೀಡುತ್ತೇವೆ. ಆದರೆ, ಸಾರ್ವಜನಿಕರಿಗೆ ಆಗುವ ತೊಂದರೆ ಪರಿಗಣಿಸಬೇಕು. ಹಾಗಾಗಿ ನಮ್ಮ ಸೇವೆ ಮುಂದುವರಿಯುತ್ತದೆ.

ಕೆಲಸ ಮಾಡುವ ಮೂಲಕವೇ ಮುಷ್ಕರದಲ್ಲಿ ಭಾಗವಹಿಸುತ್ತೇವೆ ಎಂದು ಹಲವರು ಬಸ್ ಓಡಿಸಿದ್ದಾರೆ. ಯಶವಂತಪುರ ಬಸ್ ನಿಲ್ದಾಣದಿಂದ ಏರ್‍ಪೆಪೋರ್ಟ್ ಕಡೆ ಬಿಎಂಟಿಸಿ ಬಸ್‍ಗಳು ಪೆÇಲೀಸ್ ರಕ್ಷಣೆಯೊಂದಿಗೆ ಸಂಚರಿಸಿವೆ.

Facebook Comments