ಬಿಎಂಟಿಸಿ ಮೇಲ್ವಿಚಾರಕೇತರ ಗುಡ್ಡೆಗೆ ಪರೀಕ್ಷೆ ಪ್ರತಿಬಂಧಕಾಯ್ದೆ ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

Police-Exam

ಬೆಂಗಳೂರು, ಜೂ.8- ಸಾರ್ವ ಜನಿಕ ಶಿಕ್ಷಣ ಇಲಾಖೆ ವತಿಯಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿನ ದರ್ಜೆ-3 ಮೇಲ್ವಿಚಾರಕೇತರ ಹುದ್ದೆಗಳ ನೇಮಕಾತಿಯ ಸಾಮಾನ್ಯ ಸಾಮಥ್ರ್ಯ ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಬಂಧಕಾಜ್ಞೆ ಹೊರಡಿಸಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‍ಕುಮಾರ್ ಆದೇಶ ಹೊರಡಿಸಿದ್ದಾರೆ. ಈ ಪರೀಕ್ಷೆಯು ಶಾಂತಿಯುತವಾಗಿ ನಡೆಸುವ ಹಿತದೃಷ್ಟಿಯಿಂದ ನಾಳೆ (ಜೂ.9) ಮತ್ತು ಜೂ.10ರಂದು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಬರುವ ಎಲ್ಲ ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಲಿನ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಆಯುಕ್ತರು ಪ್ರತಿಬಂಧಕಾಯ್ದೆ ವಿಧಿಸಿದ್ದಾರೆ.

Facebook Comments

Sri Raghav

Admin