ಬೆಂಗಳೂರಿಗರೇ ಗಮನಿಸಿ : ಬದಲಾಗಿದೆ ಬಿಎಂಟಿಸಿ ಸಹಾಯವಾಣಿ ಸಂಖ್ಯೆ
ಈ ಸುದ್ದಿಯನ್ನು ಶೇರ್ ಮಾಡಿ
ಬೆಂಗಳೂರು, ಸೆ.2- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಲಹೆ, ದೂರುಗಳು ಹಾಗೂ ಇನ್ನಿತರ ಸಂಸ್ಥೆಯ ಮಾಹಿತಿಯನ್ನು ಪ್ರಯಾಣಿಕರಿಗೆ ಒದಗಿಸುವ ಸಲುವಾಗಿ ನೀಡಲಾಗಿದ್ದ ಸಹಾಯವಾಣಿ (ಕಾಲ್ ಸೆಂಟರ್) ಸಂಖ್ಯೆಯನ್ನು ಬದಲಾಯಿಸಲಾಗಿದೆ.
ಈಗಾಗಲೇ ದೂರುಗಳಿಗಾಗಿ 1800-4251663 ಸಹಾಯವಾಣಿ ಸಂಖ್ಯೆ ಇದ್ದು, ನೂತನವಾಗಿ 080-22483777ಗೆ ಬದಲಾಗಿರುತ್ತದೆ. ಈ ನೂತನ ಸಹಾಯವಾಣಿ ಸಂಖ್ಯೆ ಈಗಾಗಲೇ ಜಾರಿಗೆ ಬಂದಿದ್ದು, ಈ ಸಹಾಯವಾಣಿಯು ಪ್ರತಿದಿನ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆ ವರೆಗೆ ಕಾರ್ಯನಿರ್ವಹಿಸಲಿದೆ.
ಈ ನೂತನ ಸಹಾಯವಾಣಿಯ ಸದುಪಯೋಗವನ್ನು ಪ್ರಯಾಣಿಕರು ಪಡೆದುಕೊಳ್ಳಬೇಕೆಂದು ಈ ಮೂಲಕ ಮನವಿ ಮಾಡಲಾಗಿದೆ.
Facebook Comments