ಹೆದ್ದಾರಿಯಲ್ಲೇ ಹೊತ್ತಿ ಉರಿದ ಬಿಎಂಡಬ್ಲ್ಯೂ ಕಾರ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.8- ಸಿಗ್ನಲ್‍ನಲ್ಲಿ ನಿಂತಿದ್ದ ಬಿಎಂಡಬ್ಲ್ಯೂ ಕಾರ್‍ಗೆ ಅಚಾನಕ್ಕಾಗಿ ಬೆಂಕಿ ಬಿದ್ದು ಸುಟ್ಟು ಕರಕಲಾಗಿರುವ ಘಟನೆ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಅದರಲ್ಲಿದ್ದವರು ಎಚ್ಚೆತ್ತುಕೊಂಡು ಹೊರಬಂದಿದ್ದರಿಂದ ಜೀವ ಉಳಿದಿದೆ.

ಪೀಣ್ಯ ಬಳಿಯ ಶೋಭಾ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿರುವ ಇರ್ಷಾದ್ ಎಂಬುವವರ ಪತ್ನಿ ಹಾಗೂ ಮಕ್ಕಳು ಬಿಎಂಡಬ್ಲ್ಯೂ-5 ಸೀರಿಸ್ ಕಾರಿನಲ್ಲಿ ಸಂಬಂಧಿಕರ ಮನೆಗೆ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ-4ರ 8ನೆ ಮೈಲಿ ಜಂಕ್ಷನ್ ಬಳಿ ಈ ಘಟನೆ ನಡೆದಿದೆ.

ಕಾರಿನ ಹಿಂದೆ ಹೊಗೆ ಬರುತ್ತಿದ್ದುದನ್ನು ನೋಡಿದ ಚಾಲಕರೊಬ್ಬರು ಇರ್ಷಾದ್ ಅವರಿಗೆ ಕೈ ಸನ್ನೆ ಮಾಡಿ ತಿಳಿಸಿದ್ದಾರೆ. ಅವರು ಹೊರಗೆ ಬಂದು ನೋಡಿದಾಗ ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿದೆ.ತಕ್ಷಣ ಒಳಗಿದ್ದವರನ್ನೆಲ್ಲ ಹೊರಗೆ ಕರೆಸಿಕೊಂಡು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ನೋಡ ನೋಡುತ್ತಿದ್ದಂತೆ ಕಾರಿಗೆ ಸಂಪೂರ್ಣ ಬೆಂಕಿ ವ್ಯಾಪಿಸಿ ಭಸ್ಮವಾಗಿದೆ.

ಕಾರಿನಲ್ಲಿ ಎಸಿ ಆನ್ ಮಾಡಿದ್ದರಿಂದ ಬೆಂಕಿಯ ಜ್ವಾಲೆ ಹೆಚ್ಚಾಗಲು ಕಾರಣ ಎಂದು ಹೇಳಲಾಗುತ್ತಿದೆ. ತಮ್ಮ ಫ್ಲಾಟ್‍ನ ಪಾರ್ಕಿಂಗ್ ಲಾಟ್‍ನಲ್ಲಿ ನನ್ನ ವಾಹನ ನಿಲ್ಲಿಸಿದ್ದೆ. ನಿನ್ನೆ ಇದನ್ನು ಹೊರತೆಗೆದು ಸಂಬಂಧಿಕರ ಮನೆಗೆ ಹೋಗುತ್ತಿದ್ದೆ. ಆಗ ಈ ಘಟನೆ ನಡೆದಿದೆ ಎಂದು ಇರ್ಷಾದ್ ಹೇಳಿದ್ದಾರೆ.

ಘಟನೆ ಬಗ್ಗೆ ಪೀಣ್ಯ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿಡಿದ್ದಾರೆ.

Facebook Comments

Sri Raghav

Admin