ದೋಣಿ ಮುಳುಗಿ ಮೂವರು ಜಲಸಮಾಧಿ, 20ಕ್ಕೂ ಹೆಚ್ಚು ಮಂದಿ ಕಣ್ಮರೆ..!

ಈ ಸುದ್ದಿಯನ್ನು ಶೇರ್ ಮಾಡಿ

ಕತಿಹಾರ್(ಬಿಹಾರ) ಅ.4-ಬಿಹಾರದ ಕತಿಯಾರ್ ಜಿಲ್ಲೆಯ ಮಹಾನಂದಾ ನದಿಯಲ್ಲಿ ನಿನ್ನೆ ರಾತ್ರಿ ದೋಣಿಯೊಂದು ಮುಳುಗಿ ಮೂವರು ಜಲಸಮಾಧಿಯಾಗಿದ್ದಾರೆ. ಈ ದುರ್ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಸುಮಾರು 80 ಜನರಿದ್ದ ದೋಣಿ ನಿನ್ನೆ ತಾತ್ರಿ 8.15ರಲ್ಲಿ ಬಿಹಾರ-ಬಂಗಾಳ ಗಡಿಯಲ್ಲಿ ಮುಳುಗಿತು ಎಂದು ಪೊಲೀಸ್ ಉಪ ವರಿಷ್ಠಾಧಿಕಾರಿ (ಡಿವೈಎಸ್ಪಿ) ಪಂಕಜ್ ಕುಮಾರ್ ತಿಳಿಸಿದ್ದಾರೆ. ಪಕ್ಕದ ರಾಜ್ಯದ ರಾಮಪುರ್ ಹಾತ್ ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿಸಿದ ನಂತರ ವಜೀದ್‍ಪುರ್ ಗ್ರಾಮದ ಸದಸ್ಯರು ತಮ್ಮ ಗ್ರಾಮಕ್ಕೆ ಹಿಂದುರುಗುತ್ತಿದ್ದಾಗ ಜಗನ್ನಾಥಪುರ್ ಘಾಟ್ ಬಳಿ ಈ ದುರಂತ ಸಂಭವಿಸಿತು.

ನಲವತ್ತು ಪ್ರಯಾಣಿಕರ ಸಾಮಥ್ರ್ಯದ ಈ ದೋಣಿಯಲ್ಲಿ ಎರಡಷ್ಟು ಜನರು ತುಂಬಿದ್ದರಿಂದ ದೋಣಿ ಮುಳುಗಿತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈವರೆಗೆ ಓರ್ವ ವೃದ್ದ, ಮಳೆ ಮತ್ತು ಮಗುನ ಶವವನ್ನು ಗುರುತಿಸಲಾಗಿದೆ. ಈ ದೋಣಿಯಲ್ಲಿದ್ದ ಪ್ರಯಾಣಿಕರಲ್ಲಿ ಕೆಲವರು ಈಜಿ ದಡ ಸೇರಿದ್ದಾರೆ. ಆದರೆ 20ಕ್ಕೂ ಹೆಚ್ಚು ಮಂದಿ ನೀರುಪಾಲಾಗಿರಬಹುದು ಎಂದು ಶಂಕಿಸಲಾಗಿದೆ.

ನಿನ್ನೆ ರಾತ್ರಿಯಿಂದಲೇ ಶೋಧ ಕಾರ್ಯ ಮುಂದುವರಿದಿದೆ. ನುರಿತ ಈಜುಗಾರರು ಮತ್ತು ಮುಳುಗು ತಜ್ಞರು ಕಾರ್ಯಾಚರಣೆಗೆ ನೆರವಾಗಿದ್ದಾರೆ.

Facebook Comments