ಮೀನುಗಾರಿಕೆ ದೋಣಿ ಮತ್ತು ಸರಕು ಸಾಗಣೆ ನೌಕೆ ನಡುವೆ ಡಿಕ್ಕಿ, 14 ಮಂದಿ ಕಣ್ಮರೆ

ಈ ಸುದ್ದಿಯನ್ನು ಶೇರ್ ಮಾಡಿ

ಮನಿಲಾ, ಜೂ.29-ಮೀನುಗಾರಿಕೆ ದೋಣಿ ಮತ್ತು ಸರಕು ಸಾಗಣೆ ನೌಕೆ ನಡುವೆ ಡಿಕ್ಕಿಯಾಗಿ 14 ಮಂದಿ ನಾಪತ್ತೆಯಾಗಿರುವ ಘಟನೆ ದ್ವೀಪರಾಷ್ಟ್ರ ಫಿಲಿಪ್ಪೈನ್ಸ್‍ನ ಮಂಬುರಾವೋ ಕರವಳಿ ಪಟ್ಟಣದ ಬಳಿ ಸಂಭವಿಸಿದೆ.

14 ಮೀನುಗಾರರು ಜಲಸಮಾಧಿಯಾಗಿರಬಹುದೆಂದು ಶಂಕಿಸಲಾಗಿದ್ದು, ಫಿಲಿಪ್ಫೈನ್ಸ್ ಕರಾವಳಿ ರಕ್ಷಣೆ ಪಡೆ ಸಮುದ್ರದಲ್ಲಿ ತೀವ್ರ ಶೋಧ ಮುಂದುವರಿಸಿದೆ. ಆದರೆ ಸಮುದ್ರದಲ್ಲಿ ಭಾರೀ ಬಿರುಗಾಳಿಯ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಫಿಲಿಪ್ಪೈನ್ಸ್ ರಾಜಧಾನಿ ಮನಿಲಾ ನಗರದಿಂದ ದಕ್ಷಿಣ ಭಾಗದಲ್ಲಿರುವ ಮಿಂಡೊರೊ ಓಕ್ಸಿಡೆಂಟಲ್ ಪ್ರಾಂತ್ಯದ ಮಂಬುರಾವೋ ಪಟ್ಟಣದಿಂದ 27 ಕಿ.ಮೀ. ದೂರದ ಸಾಗರದಲ್ಲಿ ಈ ಘಟನೆ ಸಂಭವಿಸಿದೆ.

ಎಂವಿ. ವಿಯೆನ್ನಾ ವುಡ್ಸ್ ಎಂಬ ಸರಕು ಸಾಗಣೆ ನೌಕೆ ಮತ್ತು ಎಫ್‍ವಿ ಲಿಬರ್ಟಿ ಫೈವ್ ಹೆಸರಿನ ಫಿಶಿಂಗ್ ಬೋಟ್ ನಡುವೆ ಡಿಕ್ಕಿಯಾಗಿ ದೋಣಿಯಲ್ಲಿದ್ದ 14 ಬೆಸ್ತರು ನಾಪತ್ತೆಯಾಗಿದ್ದಾರೆ ಎಂದು ಫಿಲಿಪ್ಪೈನ್ಸ್ ಕೋಸ್ಟ್ ಗಾರ್ಡ್‍ನ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments