ಸೆಲ್ಫಿ ತೆಗೆದುಕೊಳ್ಳುವಾಗ ದೋಣಿ ಮಗುಚಿ ಇಬ್ಬರು ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಪುಣೆ, ಮಾ.1 (ಪಿಟಿಐ)- ಸೋಲಾಪುರ ಜಿಲ್ಲೆಯ ವಂಗಿ ಪ್ರದೇಶದ ಉಜನಿ ಹಿನ್ನೀರಿನಲ್ಲಿ ದೋಣಿ ವಿಹಾರಕ್ಕೆ ತೆರಳಿದ್ದ ಕುಟುಂಬದ 39 ವರ್ಷದ ವ್ಯಕ್ತಿ ಸೆಲ್ಫಿ ತೆಗೆಯುವ ಸಂದರ್ಭದಲ್ಲಿ ಆಯಾತಪ್ಪಿ ತನ್ನ ಮಗನೊಡನೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಘಟನೆ ನಿನ್ನೆ ಸಂಜೆ ನಡೆದಿದ್ದು ಪತ್ನಿ, ಮಗಳು ಹಾಗೂ ಇಬ್ಬರು ಸ್ನೇಹಿತರೊಂದಿಗೆ ಉಜನಿ ಹಿನ್ನೀರಿನಲ್ಲಿ ದೋಣಿ ವಿಹಾರಕ್ಕೆ ಹೋಗಿದ್ದ ಅವರು ನೀರಿನ ಮಧ್ಯೆ ತಮ್ಮ ಕುಟುಂಬದೊಡನೆ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದಾರೆ.

ಆ ಸಂದರ್ಭದಲ್ಲಿ ದೋಣಿ ನಿಯಂತ್ರಣ ತಪ್ಪಿ ಮಗುಚಿದೆ. ಎಲ್ಲ ಆರು ಮಂದಿ ನೀರಿಗೆ ಬಿದ್ದಿದ್ದಾರೆ ಎಂದು ಸೋಲಾಪುರ ಎಸ್ಪಿ ತೇಜಸ್ವಿ ಸತ್ಪುತೆ ತಿಳಿಸಿದ್ದಾರೆ. 13 ವರ್ಷ ಮಗನೊಡನೆ ವ್ಯಕ್ತಿ ಮೃತಪಟ್ಟರೆ, ಉಳಿದವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿ ದಡ ಸೇರಿಸಿದ್ದಾರೆ. ನಂತರ ಶವಗಳನ್ನು ಪತ್ತೆ ಹಚ್ಚಿ ನೀರಿನಿಂದ ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ ಎಂದು ಕರ್ಮಾಲ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಶ್ರೀಕಾಂತ್ ಪಡುಲೆ ಹೇಳಿದ್ದಾರೆ.

Facebook Comments