ಸೈಕಲ್ ರಿಕ್ಷಾದಲ್ಲಿ ಸೊರೊನಾ ಸೋಂಕಿತ ಶವದ ಸಾಗಾಟ..!

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್,ಆ.13- ಕೋವಿಡ್ ಸಂದರ್ಭದಲ್ಲಿ ತುರ್ತು ನೆರವು ನೀಡಲು ಇತ್ತೀಚೆಗೆ ಆಂಧ್ರಪ್ರದೇಶ ಸರ್ಕಾರವು 1,180 ಹೊಸ ಅತ್ಯಾಧುನಿಕ ಆ್ಯಂಬುಲೆನ್ಸ್‍ಗಳನ್ನು ಬಿಡುಗಡೆ ಮಾಡಿದೆ. ಆದರೆ ಇಲ್ಲಿ ಕೋವಿಡ್‍ನಿಂದ ಮೃತಪಟ್ಟ ವ್ಯಕ್ತಿಯ ಶವನ್ನು ಸೈಕಲ್ ರಿಕ್ಷಾದಲ್ಲಿ ಸಾಗಿಸಲಾಗಿದೆ.

ಗುಂಟೂರಿನ ಬಪತಲಾ ಪ್ರದೇಶದಲ್ಲಿ ಕೋವಿಡ್‍ನಿಂದ ಮೃತಪಟ್ಟ ರೋಗಿಯ ಶವವನ್ನು ಸೈಕಲ್ ರಿಕ್ಷಾದಲ್ಲಿ ಸಾಗಿಸಲಾಗಿದೆ. ಕುಟುಂಬಸ್ಥರು ಶವವನ್ನು ಪಡೆಯಲು ಮುಂದಾಗದ ಕಾರಣ ಬಪತಲಾ ಆಸ್ಪತ್ರೆಯ ವೈದ್ಯರು ಶವಸಂಸ್ಕಾರಕ್ಕಾಗಿ ಪುರಸಭೆ ಪ್ರಾಕಾರಕ್ಕೆ ಮಾಹಿತಿ ನೀಡಿದ್ದರು.

ಕೋವಿಡ್‍ನಿಂದ ಮೃತಪಪಟ್ಟವರ ದೇಹಗಳನ್ನು ಸಾಗಿಸುವ ವಾಹನವು ದುರಸ್ತಿಯಲ್ಲಿ ಎಂಬ ಕಾರಣಕ್ಕಾಗಿ ಶವನ್ನು ಬೈಸಿಕಲ್‍ನಲ್ಲಿ ಸಾಗಿಸಲಾಗಿದೆ ಎಂದು ಹೇಳಲಾಗಿದೆ.

ಗುಂಟೂರು ಕಲೆಕ್ಟರ್, ಮುನ್ಸಿಪಲ್ ಕಮಿಷನರ್ ಮತ್ತು ನೈರ್ಮಲ್ಯ ನಿರೀಕ್ಷಕರಿಗೆ ಮೆಮೋಗಳನ್ನು ನೀಡಲಾಯಿತು. ಅಂತಿಮ ವಿಗಳಿಗಾಗಿ ಅಕಾರಿಗಳಿಗೆ ಹಸ್ತಾಂತರಿಸುವ ಮೊದಲು ಎಲ್ಲಾ ಕೋವಿಡ್ -19 ಪ್ರೊಟೋಕಾಲ್‍ಗಳನ್ನು ಅನುಸರಿಸಿದೆ ಮತ್ತು ದೇಹವನ್ನು ದೇಹದ ಚೀಲದಲ್ಲಿ ಸುತ್ತಿಡಲಾಗಿದೆ ಎಂದು ಆಸ್ಪತ್ರೆ ಹೇಳಿದೆ.

ಆಂಬ್ಯುಲೆನ್ಸ್ ಅನುಪಸ್ಥಿತಿಯಲ್ಲಿ ಪುರಸಭೆಯ ಸಿಬ್ಬಂದಿ, ಶವವನ್ನು ರಿಕ್ಷಾದಲ್ಲಿ ಸಾಗಿಸಲಾಗಿತ್ತು. ಇದರಿಂದ ಸ್ಥಳೀಯರು ಪುರಸಭೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು, ಸಾರ್ವಜನಿಕವಾಗಿಯೇ ಕೋವಿಡ್‍ನಿಂದ ಮೃತಪಟ್ಟ ವ್ಯಕ್ತಿಯ ಶವನ್ನು ಸಾಗಿಸಿರುವುದರಿಂದ ಕೊರೊನಾ ಹಬ್ಬುವ ಸಾಧ್ಯತೆ ಇದೆ ಎಂದು ಭಯಭೀತರಾಗಿದ್ದಾರೆ.

Facebook Comments

Sri Raghav

Admin