BIG SHOCKING : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜೂ.14- ಎಂ.ಎಸ್.ಧೋನಿ:ದಿ ಅನ್ ಸ್ಟೋಲ್ ಸ್ಟೋರಿ ಚಿತ್ರದ ಖ್ಯಾತಿಯ ಪ್ರಸಿದ್ಧ ನಟ ಸುಶಾತ್ ಸಿಂಗ್ ರಜಪೂತ್ (34) ಇಂದು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಫ್ಲ್ಯಾಟ್‍ನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅತ್ಯಂತ ಸುರದ್ರೂಪಿ ಮತ್ತು ಪ್ರತಿಭಾವಂತ ನಟರಾಗಿದ್ದ ಸುಶಾಂತ್ ಆತ್ಮಹತ್ಯೆ ಬಾಲಿವುಡ್‍ಗೆ ಬರ ಸಿಡಿಲು ಬಡಿದಂತಾಗಿದೆ. ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಸುಶಾಂತ್ ತಮ್ಮ ಫ್ಲ್ಯಾಟ್‍ನಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದರು.

5 ದಿನಗಳ ಹಿಂದೆಯಷ್ಟೇ ಅವರ ಮಾಜಿ ಮ್ಯಾನೇಜರ್ ದಿಶಾ ಸೈಲನ್ ಕೂಡ ಸಾವಿಗೆ ಶರಣಾಗಿದ್ದರು.ಸುಶಾಂತ್ ಸಿಂಗ್ ಈ ದುಡುಕಿನ ನಿರ್ಧಾರಕ್ಕೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತೀವ್ರ ತನಿಖೆ ಮುಂದುವರೆಸಿದ್ದಾರೆ.

ಬಿಹಾರದ ಪಾಟ್ನಾದಲ್ಲಿ 21ನೆ ಜನವರಿ 1986ರಲ್ಲಿ ಜನಿಸಿದ ಸುಶಾಂತ್ ಸಿಂಗ್ ರಜಪೂತ್ ಆರಂಭದಲ್ಲಿ ಟೆಲಿವಿಷನ್ ಮೂಲಕ ವೀಕ್ಷಕ ಕೋಟಿಯ ಗಮನ ಸೆಳೆದಿದ್ದರು. ಕಿಸ್ ದೇಸ್ ಮೇ ಮೇರಾ ದಿಲ್ ಧಾರಾವಾಹಿ ಮೂಲಕ ಗುರುತಿಸಿಕೊಂಡಿದ್ದ ಸುಶಾಂತ್‍ಗೆ ಪವಿತ್ರ ರಿಶ್ತೆ ಧಾರಾವಾಹಿ ಟೆಲಿವಿಷನ್ ಸ್ಟಾರ್ ವ್ಯಾಲ್ಯೂ ನೀಡಿತ್ತು.

ಇವರ ಪ್ರತಿಭೆ ಮತ್ತು ಸಾಮಥ್ರ್ಯ ಗುರುತಿಸಿದ ಬಾಲಿವುಡ್ ಇವರನ್ನು ಕೈ ಬೀಸಿ ಕರೆಯಿತು. ಡಿಟೆಕ್ಟಿವ್ ಬ್ಯೂಮ್ ಕೇಶ್ ಭಕ್ಷಿ , ರಭಟಾ, ಸಂಚಾರಿಯಾ, ಚಿಚ್ಚೋರೆ ಮೊದಲಾದ ಹಲವು ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ನಟಿಸಿ ಮನೋಜ್ಞ ಅಭಿನಯದ ಮೂಲಕ ರಂಜಿಸಿದ ಸುರದ್ರೂಪಿ ನಟ ರಜಪುತ್ ಚಿತ್ರ ರಸಿಕರನ್ನು ತಮ್ಮ ಅಗಾಧ ಪ್ರತಿಭೆಯಿಂದ ರಂಜಿಸಿದರು.

ಇಂದು ಮಧ್ಯಾಹ್ನ 1.30ರ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು , ಕಾಡ್ಗಿಚ್ಚಿನಂತೆ ಹರಡಿದೆ. ಬಾಲಿವುಡ್‍ನ ಖ್ಯಾತ ತಾರೆಯರು, ನಿರ್ದೇಶಕರು, ಗಣ್ಯರು ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ದಿಗ್ಭ್ರಮೆ ವ್ಯಕ್ತಪಡಿಸಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಅತ್ಯುತ್ತಮ ಟೆಲಿವಿಷನ್ ನಟ , ಸ್ಕ್ರೀನ್ ಪ್ರಶಸ್ತಿ, ಜೀ ಅವಾಡ್ರ್ಸ್, ಮೆಲ್ಬೋರ್ನ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳಿಗೆ ಪಾತ್ರರಾಗಿದ್ದ ಸುಶಾಂತ್ ನಟನೆ ಅಲ್ಲದೆ ಅದ್ಭುತ ನೃತ್ಯ ಪಟುವೂ ಆಗಿದ್ದರು. ಅವರದೇ ಆದ ನವೋದ್ಯಮವನ್ನು ಸ್ಥಾಪಿಸಿ ಸಮಾಜ ಸೇವೆಯಲ್ಲೂ ಅವರನ್ನು ಗುರುತಿಸಿಕೊಂಡಿದ್ದರು.

Facebook Comments

Sri Raghav

Admin