ಮೊದಲ ಕೊರೊನಾ ವಾಕ್ಸಿನ್ ಪಡೆದ ಬಾಲಿವುಡ್ ನಟಿ ಶಿಲ್ಪಾ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.8- ದೇಶದೆಲ್ಲೆಡೆ ಕೊರೊನಾ ವ್ಯಾಕ್ಸಿನ್ ಅಭಿಯಾನ ಶುರುವಾಗಿದ್ದು ಬಾಲಿವುಡ್ ಕಲಾವಿದರ ಪೈಕಿ ಮೊದಲ ಲಸಿಕೆಯನ್ನು ನಟಿ ಶಿಲ್ಪಾಶಿರೋಡ್ಕರ್‍ಗೆ ನೀಡಲಾಗಿದೆ. ದುಬೈನಲ್ಲಿ ನೆಲೆಸಿರುವ ಮೃತ್ಯುದಂಡ್ ಚಿತ್ರದ ನಟಿ ಕೊರೊನಾ ವ್ಯಾಕ್ಸಿನ್ ತೆಗೆದುಕೊಂಡ ನಂತರ ಅದನ್ನು ತನ್ನ ಇನ್‍ಸ್ಟಾಗ್ರಾಂನಲ್ಲಿ ಹಾಕಿದ್ದು, ಕೊರೊನಾ ವ್ಯಾಕ್ಸಿನ್‍ನಿಂದ ಯಾವುದೇ ಅಡ್ಡಪರಿಣಾಮಗಳಾಗುವುದಿಲ್ಲ, ಲಸಿಕೆಯ ಲಾಭ ಪಡೆದುಕೊಳ್ಳುವುದರ ಮೂಲಕ ಆರೋಗ್ಯವಂತರಾಗಿ 2021 ವರ್ಷವು ಎಲ್ಲರಿಗೂ ಶುಭ ತರಲೆಂದು ಬರೆದಿದ್ದಾರೆ.

ಭ್ರಷ್ಟಾಚಾರ್ ಚಿತ್ರದ ಮೂಲಕ ಬಣ್ಣದ ಲೋಕದ ಲಿಂಕ್ ಸೃಷ್ಟಿಸಿಕೊಂಡ ಶಿಲ್ಪಾ ಹಮ್, ತ್ರಿನೇತ್ರ, ದಿಲ್ ಹೈ ತೊ ಹೈ, ಜೈ ಹಿಂದ್ ಸೇರಿದಂತೆ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

Facebook Comments