ಬಾಲಿವುಡ್ ಡ್ಯಾನ್ಸರ್ ಅಭಿಜಿತ್ ಶಿಂಧೆ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Abhijit--01

ನವದೆಹಲಿ,ಆ.23- ಬಾಲಿವುಡ್ ಖ್ಯಾತ ನೃತ್ಯಗಾರ (ಡ್ಯಾನ್ಸರ್) ಅಭಿಜಿತ್ ಶಿಂಧೆ, ಮುಂಬೈನ ತಮ್ಮ ನಿವಾಸದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದಾರೆ.   ರಣವೀರ್ ಸಿಂಗ್, ರಣಬೀರ್ ಕಪೂರ್ ಸೇರಿದಂತೆ ಬಾಲಿವುಡ್‍ನ ಹಲವು ಖ್ಯಾತ ನಟರ ಚಿತ್ರಗಳಲ್ಲಿ ಕೆಲಸ ಮಾಡಿದ್ದ ಅಭಿಜಿತ್ ಶಿಂಧೆ ಅವರ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.  ಖಿನ್ನತೆಯಿಂದ ಬಳಲುತ್ತಿದ್ದ ಅಭಿಜಿತ್ ಶಿಂಧೆ ಕೆಲ ದಿನಗಳಿಂದ ಕುಟುಂಬದಿಂದ ಪ್ರತ್ಯೇಕಗೊಂಡಿದ್ದು, ಒಂಟಿಯಾಗಿ ವಾಸಿಸುತ್ತಿದ್ದರೆಂದು ಹೇಳಲಾಗಿದೆ.  ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin