ಇಸ್ರೋ ವಿಜ್ಞಾನಿಗಳಿಗೆ ಬಾಲಿವುಡ್ ಸಾಥ್

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಸೆ.7- ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ್-2 ಕಾರ್ಯಾಚರಣೆಯಲ್ಲಿ ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತದೊಂದಿಗೆ ಅತ್ಯಲ್ಪ ಹಿನ್ನಡೆಯಿಂದಾಗಿ ನಿರಾಶೆಗೊಂಡಿರುವ ಇಸ್ರೋ ವಿಜ್ಞಾನಿಗಳಿಗೆ ಹಿಂದಿ ಚಿತ್ರರಂಗ ನೈತಿಕ ಸ್ಥೈರ್ಯ ತುಂಬಿದೆ.

ಹಿರಿಯ ನಟರಾದ ಅಮಿತಾಬ್ ಬಚ್ಚನ್, ಶಾರೂಖ್ ಖಾನ್, ಕಮಲಹಾಸನ್, ತಾರೆಯರಾದ ತಾಪ್ಸಿಪನ್ನು, ಕಂಗನಾ ರಾಣಾವತ್ ಮೊದಲಾದವರು ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಗುಣಗಾನ ಮಾಡಿದ್ದಾರೆ.

ಇಸ್ರೋ ವಿಜ್ಞಾನಿಗಳು ಭಾರತೀಯರ ಕನಸನ್ನು ನನಸು ಮಾಡುವ ಕಾಲ ದೂರವಿಲ್ಲ. ಅತ್ಯಂತ ಅಲ್ಪ ಹಿನ್ನಡೆಯಿಂದ ಯಾರೂ ಹತಾಶೆಗೆ ಒಳಗಾಗುವ ಅಗತ್ಯವಿಲ್ಲ. ಹಿಂದಿ ಚಿತ್ರರಂಗ ಮತ್ತು ಭಾರತೀಯರೆಲ್ಲರೂ ಇಸ್ರೋ ವಿಜ್ಞಾನಿಗಳ ಬೆಂಬಲಕ್ಕಿದ್ದಾರೆ ಎಂದು ಬಾಲಿವುಡ್‍ನ ಖ್ಯಾತ ನಾಮರು ಹೇಳಿದ್ದಾರೆ.

Facebook Comments