ರಾಮನಗರದಲ್ಲಿ ಬಾಂಬ್‍ಗಾಗಿ ಶೋಧ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.26- ರಾಮನಗರದ ಟಿಪ್ಪು ನಗರದ ರಾಜಕಾಲುವೆಯಲ್ಲಿ ಬಾಂಬ್‍ಗಳಿಗಾಗಿ ಎನ್‍ಐಎ ಶೋಧ ನಡೆಸುತ್ತಿದೆ. ರಾಮನಗರ ಪೊಲೀಸರು, ಗುಪ್ತ ದಳ ಹಾಗೂ ಇನ್ನಿತರ ಅಧಿಕಾರಿಗಳು ಶೋಧನಾ ಕಾರ್ಯದಲ್ಲಿ ತೊಡಗಿದ್ದಾರೆ.

ನಿನ್ನೆ ದೊಡ್ಡಬಳ್ಳಾಪುರದಲ್ಲಿ ಶಂಕಿತ ಉಗ್ರ ಹಬೀಬುಲ್ಲಾ ರೆಹಮಾನ್‍ನನ್ನು ಎನ್‍ಐಎ ಬಂಧಿಸಿ ವಿಚಾರಣೆಗೊಳಪಡಿಸಿತ್ತು. ಆತ ವಿಚಾರಣೆ ಸಂದರ್ಭದಲ್ಲಿ ನೀಡಿರುವ ಹೇಳಿಕೆ ಹಿನ್ನೆಲೆಯಲ್ಲಿ ಈ ಶೋಧ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಸಂಜೆಗೆ ತಿಳಿಸಿದ್ದಾರೆ.

Facebook Comments

Sri Raghav

Admin