ತಮಿಳು ಚಿತ್ರನಟರಿಗೆ ಬಾಂಬ್ ಬೆದರಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಅ. 14- ತಮಿಳುನಾಡಿನ ಸೂಪರ್‍ಸ್ಟಾರ್ ರಜನಿಕಾಂತ್, ತಲ್ಲಾ ಅಜಿತ್, ಸೂರ್ಯ, ಇಳಯದಳಪತಿ ವಿಜಯ್ ಮನೆಗಳಲ್ಲಿ ಬಾಂಬ್ ಇರಿಸುವುದಾಗಿ ಬೆದರಿಕೆ ಒಡ್ಡಿರುವ ಘಟನೆ ಮಾಸುವ ಮುನ್ನವೇ ಈಗ ಧನುಷ್ ಹಾಗೂ ಕ್ಯಾಪ್ಟನ್ ಪ್ರಭಾಕರ್ ಖ್ಯಾತಿಯ ವಿಜಯಕಾಂತ್‍ಗೂ ಬೆದರಿಕೆ ಕರೆಗಳು ಬಂದಿವೆ.

ತಮಿಳಿನ ಸೂಪರ್‍ಸ್ಟಾರ್ ರಜನಿಕಾಂತ್‍ರ ಅಳಿಯ, ನಟ ಧನುಷ್ ಹಾಗೂ ನಟ ಹಾಗೂ ಡಿಎಂಡಿಕೆ ಪಕ್ಷದ ಮುಖಂಡ ವಿಜಯಕಾಂತ್‍ರ ಮನೆಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಪೊಲೀಸ್ ಅಕಾರಿಗಳು ನಟರುಗಳ ಮನೆಗಳಲ್ಲಿ ತಪಾಸಣೆ ನಡೆಸಿದ್ದಾರೆ.

ಚೆನ್ನೈನ ಅಭಿರಾಮಪುರಂ ನಲ್ಲಿರುವ ನಟ ಧನುಷ್ ಹಾಗೂ ವಿರುಗಂಬಕ್ಕಂನಲ್ಲಿರುವ ವಿಜಯಕಾಂತ್‍ರ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಪದೇ ಪದೇ ಪೊಲೀಸ್ ಕಂಟ್ರೋಲ್ ರೂಂಗೆ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ತಪಾಸಣೆ ನಡೆಸಲಾಯಿತಾದರೂ ಅಲ್ಲಿ ಬಾಂಬ್ ಪತ್ತೆಯಾಗದ ಕಾರಣ ಇದೊಂದು ಹುಸಿ ಕರೆಯಾಗಿದೆ ಎಂದು ಪೊಲೀಸ್ ಅಕಾರಿಗಳು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಹುಸಿ ಬಾಂಬ್ ಕರೆಯನ್ನು ಮಾಡಿರುವುದು ಒಬ್ಬನೇ ವ್ಯಕ್ತಿಯಾಗಿದ್ದು ಶೀಘ್ರವೇ ಅವನನ್ನು ಬಂಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಹಿಂದೆ ಜುಲೈ 18 ರಂದು ತಲ್ಲಾ ಅಜಿತ್ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆ ಬಂದ ಹಿನ್ನೆಲೆಯಲ್ಲಿ ಅವರ ಮನೆಯನ್ನು ಶೋಸಿದಾಗ ಆ ಮನೆಯಲ್ಲಿ ಏನೂ ಸಿಕ್ಕಿರಲಿಲ್ಲ,

ಈ ಬೆದರಿಕೆ ಕರೆಗಳನ್ನು ಯಾರೋ ಮಾನಸಿಕ ಅಸ್ವಸ್ಥ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದರಾದರೂ ಈಗ ಧನುಷ್ ಹಾಗೂ ವಿಜಯಕಾಂತ್‍ರ ಮನೆಗಳಲ್ಲೂ ಬಾಂಬ್ ಇರಿಸುವುದಾಗಿ ಬೆದರಿಕೆ ಕರೆಗಳು ಬಂದಿದ್ದು ಅವನನ್ನು ಬಂಸುವುದಾಗಿ ಪೊಲೀಸರು ಹೇಳಿದ್ದರೂ ಸೂಪರ್‍ಸ್ಟಾರ್ಸ್‍ಗಳ ಅಭಿಮಾನಿಗಳ ಮನದಲ್ಲಿ ಭಯ ಮನೆ ಮಾಡಿದೆ.

Facebook Comments

Sri Raghav

Admin