ಆ.26ಕ್ಕೆ ಆರ್ಯನ್‍ ಖಾನ್ ಜಾಮೀನು ಅರ್ಜಿ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಅ.21-ಡ್ರಗ್ ಕೇಸ್‍ನಲ್ಲಿ ಬಂಧನಕ್ಕೊಳಗಾಗಿರುವ ಸೂಪರ್ ಸ್ಟಾರ್ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿಯ ವಿಚಾರಣೆಯನ್ನು ಅ.26 ರಂದು ಕೈಗೆತ್ತಿಕೊಳ್ಳುವುದಾಗಿ ಬಾಂಬೆ ಹೈಕೋರ್ಟ್ ತಿಳಿಸಿದೆ.

ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆಯನ್ನು ತುರ್ತು ಕೈಗೆತ್ತಿಕೊಳ್ಳುವಂತೆ ವಕೀಲ ಸತೀಶ್ ಮನೆಶಿಂಧೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಡಬ್ಲ್ಯೂ ಸಾಂಬ್ರೆ ಈ ಅದೇಶ ಹೊರಡಿಸಿದ್ದಾರೆ.

ಎನ್‍ಸಿಬಿ ಪರ ವಕಾಲತ್ತು ವಹಿಸಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು ಮುಂದಿನ ವಾರದವರೆಗೂ ಸಮಯವಕಾಶ ಕೇಳಿದ್ದರು.ಹೀಗಾಗಿ ನ್ಯಾಯಾೀಶ ಸಾಂಬ್ರೆ ಅವರು ವಿಚಾರಣೆಯನ್ನುಅಕ್ಟೋಬರ್ 26 ರಂದು ನಡೆಸಲಾಗುವುದು ಎಂದು ಹೇಳಿದರು.

ನಿನ್ನೆ ಆರ್ಯನ್ ಖಾನ್ ಅವರಿಗೆ ಜಾಮೀನು ನೀಡಲು ನೀರಾಕರಿಸಿದ್ದ ವಿಶೇಷ ಎನ್‍ಡಿಪಿಎಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೊಗಲಾಗಿದೆ.

Facebook Comments