ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನೋಟಾ ಅಳವಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.20- ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನೋಟಾ ಅಳವಡಿಕೆ ಮಾಡಲು ರಾಜ್ಯ ಸರ್ಕಾರ ಕಾನೂನು ರೂಪಿಸಿದೆ. ವಿಧಾನಸಭೆಯಲ್ಲಿಂದು ಸಿಎಂ ಯಡಿಯೂರಪ್ಪನವರ ಪರವಾಗಿ ಗೃಹಸಚಿವ ಬಸವರಜ್ ಬೊಮ್ಮಾಯಿ ಅವರು 2020ನೇ ಸಾಲಿನ ಕರ್ನಾಟಕ ಪುರಸಭೆಗಳು ಮತ್ತು ಕೆಲವು ಕಾನೂನು ತಿದ್ದುಪಡಿ ವಿಧೇಯಕಗಳ ಅಂಗೀಕಾರಕ್ಕೆ ಮನವಿ ಮಾಡಿದರು.

ಶಾಸಕರು ಹಾಗೂ ಸಂಸದರ ಆಯ್ಕೆಗೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ನೋಟಾ ಜಾರಿಯಲ್ಲಿದೆ. ಆದರೆ ಸ್ಥಳೀಯ ಸಂಸ್ಥೆಗಳಲ್ಲಿ ಈ ಕಾಯ್ದೆ ಇರಲಿಲ್ಲ. ಹಾಗಾಗಿ ಕಾನೂನು ತಿದ್ದುಪಡಿ ತರುತ್ತಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್‍ನ ದಿನೇಶ್‍ಗುಂಡೂರಾವ್ ಮಾತನಾಡಿ, ಮತದಾನಕ್ಕೆ ಆಗಮಿಸುವಾಗಲೇ ಯಾರಿಗೆ ಮತ ಹಾಕಬೇಕು ಎಂದು ತೀರ್ಮಾನ ಮಾಡಿಕೊಂಡು ಬರುತ್ತಾರೆ. ಅಂಥವರಿಗೆ ನೋಟಾ ಜಾರಿಗೊಳಿಸುವ ಅಗತ್ಯವಿಲ್ಲ. ಅದರ ಬದಲಾಗಿ ಕಡ್ಡಾಯ ಮತದಾನ ಜಾರಿಗೆ ತನ್ನಿ. ಆಮೇಲೆ ನೋಟಾ ಅವಕಾಶವನ್ನು ಸೇರಿಸಿ ಎಂದರು.

ಈ ಹಿಂದೆ ಎಚ್.ಕೆ.ಪಾಟೀಲ್ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವರಾಗಿದ್ದಾಗ ಕಡ್ಡಾಯ ಮತದಾನಕ್ಕೆ ಪ್ರಯತ್ನ ಪಟ್ಟಿದ್ದರು ಎಂದು ಹೇಳಿದರು.ಚರ್ಚೆ ಬಳಿಕ ವೀಧೆಯಕವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

Facebook Comments