ಬೊಮ್ಮಾಯಿ ಆರ್‌ಎಸ್‌ಎಸ್‌ ಆಯ್ಕೆಯ ಮುಖ್ಯಮಂತ್ರಿ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.26- ಬಸವರಾಜ ಬೊಮ್ಮಾಯಿ ಅವರನ್ನು ಆರ್‍ಎಸ್‍ಎಸ್ ಮುಖ್ಯಮಂತ್ರಿ ಮಾಡಿದೆ. ಬಿಜೆಪಿ ರಾಜಕೀಯ ಪಕ್ಷವಾಗಿದ್ದರೂ ಆರ್‍ಎಸ್‍ಎಸ್‍ನ ಮುಖವಾಡವಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಫುಡ್‍ಕಿಟ್ ಹಾಗೂ ಕೋವಿಡ್‍ನಿಂದ ಮೃತಪಟ್ಟವರಿಗೆ 10 ಸಾವಿರ ರೂ.ಗಳ ವೈಯಕ್ತಿಕ ಪರಿಹಾರದ ಚೆಕ್ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಆಪರೇಷನ್ ಕಮಲ ನಡೆಸಿ ಹಿಂಬಾಗಿಲ ಮೂಲಕ ಅಕಾರ ಹಿಡಿದರು.

ಈಗ ಬಿಜೆಪಿಯವರು ಅವರನ್ನೇ ಕಿತ್ತು ಹಾಕಿದ್ದಾರೆ. ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಎಂದು ಹೇಳುವ ಡೋಂಘಿ ಬಿಜೆಪಿ ಸರ್ಕಾರದಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಒಬ್ಬ ವ್ಯಕ್ತಿಗೂ ಸಚಿವರಾಗಿಲ್ಲ ಎಂದು ಆರೋಪಿಸಿದರು.

ಬಿಜೆಪಿಯವರು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಮಾಡುವ ಗೋಬೆಲ್ಸ್ ಸಿದ್ಧಾಂತ ಪಾಲನೆ ಮಾಡುತ್ತಾರೆ. ಸುಳ್ಳಿನ ಪ್ಯಾಕ್ಟರಿಯನ್ನೇ ಹೊಂದಿದ್ದಾರೆ. ಅಲ್ಲಿ ಅಂತೆ-ಕಂತೆ ಸುಳ್ಳುಗಳನ್ನು ತಯಾರು ಮಾಡಿ ಮಾರುಕಟ್ಟೆ ಮಾಡುವ ಮೂಲಕ ಆ ಪಕ್ಷದ ನಾಯಕರು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿಯವರು ಸ್ವಾತಂತ್ರ್ಯ ಹೋರಾಟಕ್ಕಾಗಿ ಯಾವ ಕೊಡುಗೆಯನ್ನೂ ನೀಡಿಲ್ಲ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿಲ್ಲ. ವಂದೇ ಮಾತರಂ ಗೀತೆಯನ್ನು ಆರ್‍ಎಸ್‍ಎಸ್‍ನವರು ಇತ್ತೀಚಿಗೆ ಹೇಳಲು ಶುರು ಮಾಡಿದ್ದಾರೆ. ದೇಶ ಭಕ್ತರು ಎಂದು ಬಿಂಬಿಸುಕೊಳ್ಳುವ ಪ್ರಯತ್ನ ಮಾಡುತ್ತಾರೆ ಎಂದು ಲೇವಡಿ ಮಾಡಿದರು. ಆರ್.ಗುಂಡೂರಾವ್ ಅವರು ಅಜಾನಭಾವುವಾಗಿದ್ದರು, ಹೃದಯ ವೈಶಾಲ್ಯ ಹೊಂದಿದ್ದರು ಎಂದು ಸಿದ್ದರಾಮಯ್ಯ ಕೊಂಡಾಡಿದರು.

Facebook Comments