ಲಿವರ್ ಕ್ಯಾನ್ಸರ್ ಗೆ ಬಲಿಯಾದ ಬಾಕ್ಸರ್ ಡಿಂಕೂಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜೂ.10-ಏಷ್ಯನ್ ಗೇಮ್ಸ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದ ಬಾಕ್ಸರ್ ಡಿಂಕೂಸಿಂಗ್ ನಿಧನರಾಗಿದ್ದಾರೆ. ಕಳೆದ 2017ರಿಂದ ಲಿವರ್ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿದ್ದ 42 ವರ್ಷದ ಡಿಂಕೂಸಿಂಗ್ ಅವರು ಇಂದು ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ಡಿಂಕೂಸಿಂಗ್ 1998ರ ಬ್ಯಾಂಕಾಕ್ ಏಷ್ಯನ್ ಗೇಮ್ಸ್‍ನಲ್ಲಿ ಚಿನ್ನದ ಪದಕ ಗೆದ್ದ ನಂತರ ಭಾರತ ಬಾಕ್ಸಿಂಗ್ ಕ್ಷೇತ್ರದಲ್ಲಿ ಮುಂಚೂಣಿಗೆ ಬಂದಿತ್ತು. ಅಪ್ರತಿಮ ಬಾಕ್ಸಿಂಗ್ ಪಟು ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟ ಸಂಭವಿಸಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ಟ್ವಿಟ್ ಮಾಡಿದ್ದಾರೆ.

ಲಿವರ್ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿದ್ದ ಮಣಿಪುರ ಮೂಲದ ಸಿಂಗ್ ಅವರು ಕಳೆದ ವರ್ಷದ ಕೊರೊನಾ ಸಂಕಷ್ಟದಿಂದಲೂ ಪಾರಾಗಿದ್ದರೂ. ಆದರೆ, ಇದೀಗ ಕ್ಯಾನ್ಸರ್‍ಗೆ ಬಲಿಯಾಗಿದ್ದಾರೆ. ಅವರ ಕ್ರೀಡಾ ಸ್ಫೂರ್ತಿ ಇತರ ಆಟಗಾರರಿಗೆ ಮಾದರಿಯಾಗಲಿ ಎಂದು ರಿಜಿಜು ಬಣ್ಣಿಸಿದ್ದಾರೆ.

Facebook Comments

Sri Raghav

Admin