ಪೆನ್ನಿನ ಕ್ಯಾಪ್ ನುಂಗಿದ್ದ ಬಾಲಕ ಸಾವು, ವೈದ್ಯರ ನಿರ್ಲಕ್ಷ್ಯ ಆರೋಪ..!

ಈ ಸುದ್ದಿಯನ್ನು ಶೇರ್ ಮಾಡಿ

Pen-Cap--01

ಬಾಗಲಕೋಟೆ, ಫೆ.6- ಪೆನ್ನಿನ ಕ್ಯಾಪ್ ನುಂಗಿದ್ದ ಬಾಲಕನಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದ್ದರಿಂದ ಆತ ಸಾವನ್ನಪ್ಪಿದ್ದಾನೆಂದು ಆರೋಪಿಸಿ ಪೋಷಕರು ರಾತ್ರಿಯಿಡೀ ಪ್ರತಿಭನೆ ನಡೆಸಿರುವ ಘಟನೆ ನಡೆದಿದೆ.

ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ಮುತ್ತಪ್ಪ ಬಿರೋಜಿ (9) ಮೃತಪಟ್ಟ ಬಾಲಕ.ಮುತ್ತಪ್ಪ ಕಳೆದ ನಾಲ್ಕು ದಿನಗಳ ಹಿಂದೆಯೇ ಪೆನ್ನಿನ ಕ್ಯಾಪ್ ನುಂಗಿದ್ದು, ಈ ಬಗ್ಗೆ ಪೋಷಕರಿಗೆ ತಿಳಿಸಿದ್ದನು.

ಪೋಷಕರು ವಿವಿಧ ಆಸ್ಪತ್ರೆಗಳಿಗೆ ತೋರಿಸಿದ್ದರು. ನಿನ್ನೆ ಕುಮಾರೇಶ್ವರ ಆಸ್ಪತ್ರೆಗೆ ಆಪರೇಷನ್‍ಗೆಂದು ದಾಖಲು ಮಾಡಲಾಗಿತ್ತು. ಈ ವೇಳೆ ಬಾಲಕ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪಿಸಿ ಪೋಷಕರು ಆಸ್ಪತ್ರೆ ಮುಂಭಾಗ ಶವವಿಟ್ಟು ಪ್ರತಿಭಟನೆ ನಡೆಸಿದರು.

ಸುದ್ದಿ ತಿಳಿದ ಕೂಡಲೇ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪೋಷಕರಿಗೆ ಸಮಾಧಾನಪಡಿಸಲು ಮುಂದಾದರು. ಆದರೆ, ಪೋಷಕರು ಕೂಡಲೇ ವೈದ್ಯರನ್ನು ಕೆಲಸದಿಂದ ತೆಗೆದುಹಾಕಿ ಕ್ರಮ ಕೈಗೊಳ್ಳಬೇಕು.

ಇದ್ದ ಒಬ್ಬ ಮಗನನ್ನು ಕಳೆದುಕೊಂಡಿದ್ದೇವೆ ಎಂದು ಪೋಷಕರು ಅಳಲು ತೋಡಿಕೊಂಡರು. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin