ಸಂಗಪ್ಪಗೋಳ ನಿಧನಕ್ಕೆ ಡಿಸಿಎಂ ಲಕ್ಷ್ಮಣ ಸವದಿ ತೀವ್ರ ಶೋಕ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ: ಜಿಲ್ಲೆಯ ಹಿರಿಯ ರಾಜಕೀಯ ಮುತ್ಸದ್ದಿ ಬಿ ಆರ್ ಸಂಗಪ್ಪಗೋಳ ಅವರ ನಿಧನಕ್ಕೆ ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ .

ಸಂಗಪ್ಪಗೋಳ ಅವರು ಬಡವರಿದ್ದರೂ ಸಮಾಜಮುಖಿಯಾಗಿ ಜೀವನ ಪರ್ಯಂತ ಹೋರಾಟ ಮಾಡಿಕೊಂಡು ಬಂದಿದ್ದರು. ಸ್ವಂತಕ್ಕಾಗಿ ಎಂದು ಆಲೋಚನೆ ಮಾಡಿದವರಲ್ಲ. ಜಿಲ್ಲಾ ಹೋರಾಟ ಮಾಡುತ್ತಲೇ ಇದ್ದರು. ಅವರಲ್ಲಿ ಸಾಮಾಜಿಕ ಕಳಕಳಿಯಿತ್ತು. ಅಂತಹ ಧೀಮಂತ ಶಕ್ತಿಯನ್ನು ಕಳೆದುಕೊಂಡಿದ್ದು ದೊಡ್ಡ ಹಾನಿಯಾಗಿದೆ. ಸಮಾಜದ ಶಕ್ತಿ ಕಣ್ಮರೆಯಾಗಿದೆ. ಇದು ಸಮಾಜಕ್ಕೆ ತುಂಬಲಾರದ ಹಾನಿಯಾಗಿದೆ .

ಸಂಗಪ್ಪಗೋಳ ಅವರು ಜಿಲ್ಲೆಯ ಬಹುದೊಡ್ಡ ರಾಜಕೀಯ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರೂ ಚಿಕ್ಕೋಡಿ ಜಿಲ್ಲೆಯಾಗಬೇಕೆಂದು ಅವಿರತವಾಗಿ ಹೋರಾಟ ನಡೆಸಿದ್ದ ಸಂಗಪ್ಪಗೋಳ ಚಿಕ್ಕೋಡಿ ಭಾಗದ ಒಣ ಜಮೀನಿನಲ್ಲಿ ಅಂತರ್ಜಲ ಹೆಚ್ಚಳ ಮಾಡಬೇಕು ಎಂಬ ಬಗ್ಗೆ ಸರಕಾರದ ಗಮನ ಸೆಳೆದು ಅದರಲ್ಲಿ ಯಶಸ್ವಿಯೂ ಆಗಿದ್ದರು.

ಇಂತಹ ಹತ್ತು ಹಲವು ಹೋರಾಟಗಳ ಹೋರಾಟಗಳ ಮೂಲಕ ಗುರುತಿಸಿಕೊಂಡಿದ್ದ ಸಂಗಪ್ಪಗೋಳ ಅವರ ಹೋರಾಟ ಸದಾ ಸ್ಫೂರ್ತಿ ಅವರ ನಿಧನದಿಂದ ತುಂಬಲಾರದ ನಷ್ಟ ಆಗಿದೆ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ. ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin