‘ಬ್ರಹ್ಮಚಾರಿ’ಯಾಗಿ ಈ ವಾರ ಥಿಯೇಟರ್ ಗೆ ಬರ್ತಿದಾರೆ ನೀನಾಸಂ ಸತೀಶ್

ಈ ಸುದ್ದಿಯನ್ನು ಶೇರ್ ಮಾಡಿ

ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಮ್ಮೆ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವುದರ ಜತೆಗೆ ಒಂದು ಸಂದೇಶ ನೀಡಲು ಬರುತ್ತಿರುವ ಚಿತ್ರ ಬ್ರಹ್ಮಚಾರಿ. ಡಬಲ್ ಎಂಜಿನ್ ಖ್ಯಾತಿಯ ಚಂದ್ರಮೋಹನ್ ನಿರ್ದೇಶನದ ಬ್ರಹ್ಮಚಾರಿ ಈ ವಾರ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.

ಅಯೋಗ್ಯ ಚಿತ್ರದ ನೀನಾಸಂ ಸತೀಶ್ ಹಾಗೂ ರಂಗನಾಯಕಿ ಖ್ಯಾತಿಯ ಅದಿತಿ ಪ್ರಭುದೇವ ಈ ಚಿತ್ರದ ಪ್ರಮುಖ ಪಾತ್ರಧಾರಿಗಳು. ಉದಯ ಕೆ.ಮೆಹ್ತಾ ಅವರ ನಿರ್ಮಾಣದ ಎಂಟನೆ ಚಿತ್ರವೂ ಇದಾಗಿದೆ.ಬಿಡುಗಡೆಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕರು, ನಾನು ಇಂಡಸ್ಟ್ರಿಗೆ ಬಂದು 10 ವರ್ಷಗಳಾಗಿವೆ.

ಕಥೆ ರೆಡಿಯಾದ ಮೇಲೆ ಫಸ್ಟ್ ಸತೀಶ್ ಬಳಿ ಹೋದೆ ಕಥೆ ಕೇಳಿ ಅವರೂ ತಕ್ಷಣ ಒಪ್ಪಿದರು. ಅಲ್ಲದೆ ಅವರ ಜತೆ ದತ್ತಣ್ಣ ಇರಬೇಕೆಂದು ಕಥೆ ಮಾಡಿದಾಗಲೇ ನಿರ್ಧರಿಸಿದ್ದೆವು. ನಾಯಕಿಯಾಗಿ ಅದಿತಿ ಅಭಿನಯಿಸಿದ್ದಾರೆ ತುಂಬಾ ಡೆಡಿಕೇಟೆಡ್ ಕಲಾವಿದೆ. ಈಗಾಗಲೇ ನಮ್ಮ ಚಿತ್ರದ ಹಾಡು ಮಿಲಿಯನ್ ವ್ಯೂಸ್ ದಾಟಿದೆ. ಈ ಚಿತ್ರವನ್ನು ಕೆಆರ್‍ಜಿ ಸ್ಟುಡಿಯೋಸ್ ಕರ್ನಾಟಕದಾದ್ಯಂತ ಬಿಡುಗಡೆ ಮಾಡುತ್ತಿದೆ ಎಂದು ಹೇಳಿದರು.

ನಂತರ ನಾಯಕ ಸತೀಶ್ ಮಾತನಾಡಿ, ಲವ್ ಇನ್ ಮಂಡ್ಯ ಟೈಂನಲ್ಲೇ ಈ ಸಿನಿಮಾ ಶುರು ಆಗಿತ್ತು. ಆ ಸಿನಿಮಾ ಕೂಡ 28ರಂದೇ ರಿಲೀಸಾಗಿತ್ತು. ಹಾಗಾಗಿ 28ರಂದು ಕೆಲ ಮಲ್ಟಿಪ್ಲೆಕ್ಸ್‍ಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ. ಅಧಿಕೃತವಾಗಿ 29ರಂದು ಎಲ್ಲಾ ಕಡೆ ಚಿತ್ರ ಬಿಡುಗಡೆಯಾಗುತ್ತಿದೆ. ನನ್ನಂಥ ನೂರು ಜನ ಕಲಾವಿದರು, ನಿರ್ದೇಶಕರು ಬರ್ತಾರೆ. ಆದರೆ, ಇಂಥ ನಿರ್ಮಾಪಕರು ಸಿಗೋದು ಕಷ್ಟ. ಇಂಥವರು ಉಳಿಯಬೇಕು. ಜೊತೆಗೆ ಕಥೆ ಕೂಡ ಅವರೇ ಮಾಡಿದ್ದಾರೆ. ನಿರ್ಮಾಪಕರಿಗೂ ಟ್ಯಾಲೆಂಟ್ ಇರುತ್ತೆ ಅಂತ ತೋರಿಸಿಕೊಟ್ಟಿದ್ದಾರೆ. ಚಂದ್ರಮೋಹನ್ ಈ ಸಿನಿಮಾ ಮುಖಾಂತರ ದೊಡ್ಡ ಡೈರೆಕ್ಟರ್ ಆಗಿ ಹೊರ ಹೊಮ್ಮುತ್ತಾರೆ ಎಂದು ಹೇಳಿದರು.

ನಾಯಕಿ ಅದಿತಿ ಪ್ರಭುದೇವ ಮಾತನಾಡಿ, ನಾನು ಈವರೆಗೆ ಕಾಮಿಡಿ ಸಿನಿಮಾ ಮಾಡಿದ್ದಿಲ್ಲ. ಮೊದಲ ಬಾರಿಗೆ ಒಂದು ಕಾಮಿಡಿ ಚಿತ್ರದಲ್ಲಿ ಆ್ಯಕ್ಟ್ ಮಾಡಿದ್ದೇನೆ. ರಿಯಾಲಿಟಿಗೆ ತುಂಬಾ ಹತ್ತಿರವಾದ ಸಿನಿಮಾ ಎಂದು ಹೇಳಿದರು. ಹಿರಿಯ ನಟ ದತ್ತಣ್ಣ ಮಾತನಾಡುತ್ತಾ, ಈ ಚಿತ್ರದ ವಿಷಯ ಚೆನ್ನಾಗಿದೆ ಮನುಷ್ಯನ ಜೀವನದಲ್ಲಿ ಒಂದು ಮಿಸ್ಟೇಕ್ ಆದರೆ ಜೀವನ ಪೂರ್ತಿ ಅದನ್ನು ಹೇಗೆ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ ಎಂದರು.

ಇದೊಂದು ಕಾಮಿಡಿ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿದ್ದು, ಈ ಚಿತ್ರಕ್ಕೆ ರವಿಕುಮಾರ್ ಅವರ ಛಾಯಾಗ್ರಹಣವಿದೆ. ಹಾಗೆಯೇ ಧರ್ಮವಿಶ್ ಸಂಗೀತ ನೀಡಿದ್ದಾರೆ. ಅರ್ಜುನ್ ಕಿಟ್ಟು ಸಂಕಲನ, ಮುರಳಿ ನೃತ್ಯ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ, ಪ್ರಕಾಶ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಈ ಚಿತ್ರದಲ್ಲಿ ಶಿವರಾಜ್ ಕೆ.ಆರ್.ಪೇಟೆ, ಅಶೋಕ್, ಅಕ್ಷತ, ಅಚ್ಯುತ್‍ಕುಮಾರ್, ಪದ್ಮಜಾರಾವ್, ದತ್ತಣ್ಣ ಮುಂತಾದವರು ಈ ಚಿತ್ರದ ತಾರಾಬಳಗದ ಜೊತೆಗೆ ಮಜÁಭಾರತದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದ ನೂತನ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಬೆಳ್ಳಿ ಪರದೆ ಮೇಲೆ ಬ್ರಹ್ಮಚಾರಿಯ ಆಟ ನೋಡಬೇಕಿದೆ.

Facebook Comments