ಪುಷ್ಪಲೋಕದ ವಿಸ್ಮಯ : ಒಂದೇ ಗಿಡದಲ್ಲಿ ಅರಳಿದ 68 ಬ್ರಹ್ಮ ಕಮಲ..!

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ, ಜೂ.19- ಹೂಗಳೆಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ ಅದರಲ್ಲೂ ವರ್ಷಕ್ಕೊಮ್ಮೆ ಕಾಣಸಿಗುವ ವಿಶೇಷ ಹೂಗಳೆಂದರೆ ಎಂಥವರಿಗೂ ಕಾದು ನೋಡುವ ಕಾತುರತೆ ಇದ್ದೆ ಇರುತ್ತೆ.

ಇಲ್ಲಿನ ಚಾಮರಾಜಪೇಟೆ (ಅಂಬೇಡ್ಕರ್ ನಗರ) ನಿವಾಸಿ ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಸಿ,.ರಾಜಾಕಾಂತ್ ಹಾಗೂ ಇವರ ಮನೆಯೊಡತಿ ಲಕ್ಷ್ಮೀದೇವಿ ಕೆ. ಅವರ ಮನೆಯ ಆವರಣದಲ್ಲಿ ಪುಷ್ಪಲೋಕದ ವಿಸ್ಮಯ ಮೂಡಿಸುವ ಬ್ರಹ್ಮಕಮಲ ಗಿಡದಲ್ಲಿ 68 ಹೂಗಳು ಅರಳುವ ಮೂಲಕ ನೋಡುಗರ ಮನಸೂರೆಗೊಂಡಿವೆ.

ಬ್ರಹ್ಮಕಮಲದ ಗಿಡವು ವರ್ಷಕ್ಕೊಮ್ಮೆ ಬಿಡುವ ಹೂಗಳನ್ನು ನೋಡುವುದೇ ಒಂದು ಸುಂದರ ಮಾತ್ರವÀಲ್ಲ, ಅರಳಿದ ಹೂಗಳನ್ನು ನೋಡುವವರ ಮನವೂ ಅರಳುತ್ತದೆ.

ಈ ಹೂವಿನ ಆಯುಸ್ಸು ಸಹಾ ತುಂಬಾ ಕಡಿಮೆ. ರಾತ್ರಿ ಅರಳಿ ಬೆಳಗಾಗುವುದರೊಳಗೆ ಮುದುಡಿ ಮುದ್ದೆಯಾಗುತ್ತದೆ. ಹೌದು ಅದರ ಹೆಸರೇ ಬ್ರಹ್ಮಕಮಲ. ವರ್ಷದಲ್ಲಿ ಒಮ್ಮೆ ಮಾತ್ರ ಅರಳುವ ಈ ಹೂವು ಸೂರ್ಯನ ಬೆಳಕಿನಲ್ಲಿ ಮೊಗ್ಗಾಗಿ ರಾತ್ರಿ ಚಂದ್ರ ಬರುವುದನ್ನು ಕಾದು ಸರಿ ಸುಮಾರು 11 ಗಂಟೆಗೆ ಅರಳಿ ಬೆಳಗಾಗುವ ಮುಂಚೆಯೇ ಕಮರುವ ಈ ಪುಷ್ಪವೇ ಬ್ರಹ್ಮಕಮಲ.

ಉತ್ತರಖಾಂಡ ಮತ್ತು ಹಿಮಾಲಯಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ಹೂವು ಅತಿ ಎತ್ತರದಲ್ಲಿ ಬೆಳೆಯುವ ಹೂವೆಂದೂ ಸಹಾ ಬ್ರಹ್ಮಕಮಲವನ್ನು ಕರೆಯುವುದು ಉಂಟು. ಸೃಷ್ಠಿ ಕರ್ತ ಬ್ರಹ್ಮನ ಕೈಯಲ್ಲಿ ಈ ಹೂವು ಇರುವುದರಿಂದಲೋ ಏನೋ ಇದನ್ನು ಬ್ರಹ್ಮಕಮಲ ಎಂದೂ(ಪುಷ್ಪ ಲೋಕದ ವಿಸ್ಮಯ) ಕರೆಯಬಹುದೆಂಬ ನಂಬಿಕೆ ಇದೆ.

ಬ್ರಹ್ಮಕಮಲ ಹೂ ಅರಳುವುದನ್ನು ಕಾದು ತಮ್ಮ ಮನಸ್ಸಿನ ಇಂಗಿತವನ್ನು ಬೇಡಿಕೊಂಡರೆ ಅವರ ಆಸೆ ಈಡೇರುತ್ತದೆ, ಎಂಬ ನಂಬಿಕೆಯೂ ಇದೆ. ಇಷ್ಟೇ ಅಲ್ಲ, ಈ ಹೂವು ಅರಳುವ ಮನೆಯವರು ಸಂಪತ್ಪರಿತರಾಗಿರುತ್ತಾರೆ ಎಂಬ ಪ್ರತೀತಿ ಕೂಡ ಇದೆ. ಇನ್ನೂ ಕೆಲವರು ಅರಳಿದ ಈ ಪುಷ್ಪಕ್ಕೆ ಪೂಜೆ ಸಲ್ಲಿಸಿ ವರದಾಶಂಕರ ವ್ರತವನ್ನೂ ಆಚರಿಸುತ್ತಾರೆ. ಇದೇನೇ ಇರಲಿ ಇಷ್ಟು ದೊಡ್ಡ ಗಾತ್ರದ ಬ್ರಹ್ಮಕಮಲಹೂವೊಂದು ಅರಳಿ ನಿಂತಿರುವುದನ್ನು ರಾತ್ರಿ ವೇಳೆ ಕಣ್ತುಂಬಿಕೊಳ್ಳುವ ಸಂತಸವೇ ಬೇರೆ.

ಬ್ರಹ್ಮ ಕಮಲ ಹೂವಿನ ಗಿಡವನ್ನು ದೈವಿಕ ಭಾವನೆಯಿಂದ ಹಾಗೂ ಅಲಂಕಾರಿಕ ಗಿಡವಾಗಿ ಬೆಳೆಸಲಾಗುತ್ತದೆ, ಇದು ಚಳಿಗಾಲದ ವರ್ಷಕ್ಕೊಮ್ಮೆ ಹೂ ಬಿಡುವ ವಿಶೇಷ ಗಿಡವೂ ಹೌದು!

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ