ಸುಖನಿದ್ರೆಯಿಂದ ಹೆಚ್ಚಾಗುತ್ತೆ ಜ್ಞಾಪಕ ಶಕ್ತಿ ..!

ಈ ಸುದ್ದಿಯನ್ನು ಶೇರ್ ಮಾಡಿ

ಸುಖನಿದ್ರೆ ಮಾಡುವುದರಿಂದ ಏಕಾಗ್ರತೆ, ಮೆದುಳು ಆಯಸ್ಸು ಹೆಚ್ಚುತ್ತದೆಯೇ? ಹೌದು. ಇದು ನಿಜ ಎನ್ನುತ್ತದೆ ಒಂದು ಸಂಶೋಧನೆ. ರಾತ್ರಿ ವೇಳೆ ನಿಗದಿತವಾಗಿ ಏಳು ಗಂಟೆಗಳ ಕಾಲ ಸುಖ ನಿದ್ರೆ ಮಾಡುವುದರಿಂದ ನಿಮ್ಮ ಮೆದುಳಿನ ಅಯಸ್ಸು ಎರಡು ವರ್ಷ ಹೆಚ್ಚಾಗುತ್ತದೆ. ಅಮೆರಿಕದ ಸಂಶೋಧಕರ ತಂಡವೊಂದು ಇತ್ತೀಚೆಗೆ ನಡೆಸಿದ ಪ್ರಯೋಗದಿಂದ ಹೊರ ಬಂದ ಫಲಿತಾಂಶವಿದು.

ಅಮೆರಿಕದ ಸಂಶೋಧಕರ ತಂಡವೊಂದು 70ರ ವೃದ್ದೆಯರ ಮೇಲೆ ಈ ಸಂಶೋಧನೆ ನಡೆಸಿದೆ. ಆ ಪ್ರಕಾರ ವೃದ್ದೆಯೊಬ್ಬರು ರಾತ್ರಿ ವೇಳೆ ಏಳು ಗಂಟೆಗಳ ಕಾಲ ಸುಖವಾಗಿ ನಿದ್ರಿಸಿದರೆ, ಅವರ ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಯಲ್ಲಿ ಏರಿಕೆಯಾಗಲಿದೆ. ಒಂಭತ್ತು ಗಂಟೆ ನಿದ್ರೆ ಮಾಡಿದ ವೃದ್ಧೆಯ ಮೆದುಳಿಗಿಂತ ಹೆಚ್ಚು ಕ್ರಿಯಾಶೀಲವಾಗಿ ಇರುವುದನ್ನು ಸಂಶೋಧಕರು ದಾಖಲಿಸಿದ್ದಾರೆ.

ಅತೀ ನಿದ್ರೆ ಮಾಡುವವರು ಹಾಗೂ ನಿದ್ದೆಗೆಡುವವರಿಗಿಂತ ರಾತ್ರಿ ವೇಳೆ ಏಳು ಗಂಟೆ ನಿದ್ರೆ ಮಾಡುವವರ ಮೆದುಳು ಕ್ರಿಯಾಶೀಲವಾಗಿದ್ದು, ಅವರಲ್ಲಿ ಏಕಾಗ್ರತೆಯೂ ಹೆಚ್ಚಾಗಿರುತ್ತದೆ. ಮಾತ್ರವಲ್ಲ, ಜೊತೆಗೆ ಎರಡು ವರ್ಷ ಆಯಸ್ಸು ಕೂಡ ಹೆಚ್ಚಾಗುತ್ತದೆ. ಎಂಬುದನ್ನು ವಿಜ್ಞಾನಿಗಳು ಸಂಶೋಧನೆಯ ಫಲಿತಾಂಶದಿಂದ ಬಲವಾಗಿ ನಂಬಿದ್ದಾರೆ.

ಇದಕ್ಕೂ ಮುನ್ನ ನಡೆಸಿದ ಸಂಶೋಧನೆಗಳಲ್ಲಿ ಏಳು ಗಂಟೆಗಿಂತ ಹೆಚ್ಚು ಕಾಲ ನಿದ್ರೆ ಮಾಡಿದರೆ ತೂಕ ಹೆಚ್ಚಾಗುವ ಜೊತೆಗೆ ಹೃದ್ರೋಗ ಮತ್ತು ಮಧುಮೇಹ ರೋಗಕ್ಕೂ ಕಾರಣವಾಗುತ್ತದೆ ಎಂದು ತಿಳಿದು ಬಂದಿತ್ತು. ಆದರೆ, ಈ ಹೊಸ ಸಂಶೋಧನೆ ಏಕಾಗ್ರತೆ ಮತ್ತು ಮೆದುಳು ಆಯಸ್ಸು ವೃದ್ದಿಯ ಮೇಲೆ ಬೆಳಕು ಚೆಲ್ಲಿದೆ.

ಈ ಸಂಶೋಧನೆಯನ್ನು ಕೆನಡಾದ ಬ್ಯಾಂಕೊಂದರಲ್ಲಿ ಇತ್ತೀಚೆಗೆ ನಡೆದ ಆಲ್ಜಮೈರ್ ಸಂಘದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡಿಸಲಾಗಿದೆ. ಐದು ವರ್ಷಗಳ ಕಾಲ ನಡೆಸಿದ ಈ ಅಧ್ಯಯನದಲ್ಲಿ 70 ವರ್ಷದ 15 ಸಾವಿರ ಮಹಿಳೆಯರು ಪಾಲ್ಗೊಂಡಿದ್ದರು.

Facebook Comments