ಬ್ರೆಜಿಲ್‍ ನಲ್ಲಿ ಕೊರೋನಾ ಮಹಾಮಾರಿಗೆ 22,165 ಜನ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ರಿಯೋ-ಡಿ-ಜನೈರೋ, ಮೇ 24- ಜಗತ್ತಿನ ಮಹಾ ಶಕ್ತಿಶಾಲಿ ದೇಶ ಅಮೆರಿಕ ಕೊರೊನಾ ಸೋಂಕು ಮತ್ತು ಸಾವಿನಲ್ಲಿ ಮೊದಲ ಸ್ಥಾನದಲ್ಲಿದ್ದು, ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ.

ಸಾಂಬಾ ರಾಷ್ಟ್ರದಲ್ಲಿ ಸುಮಾರು 3.50 ಲಕ್ಷ ಮಂದಿಗೆ ಸೋಂಕು ತಗುಲಿದ್ದು, 22,165 ಜನರು ಸಾವಿಗೀಡಾಗಿದ್ದಾರೆ. ಕೊರೊನಾ ವೈರಸ್ ದಾಳಿಯಿಂದ ನಲುಗುತ್ತಿರುವ ಬ್ರೆಜಿಲ್ ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಸೋಂಕು ಮತ್ತು ಸಾವು ಪ್ರಕರಣಗಳ ರಾಷ್ಟವೆಂಬ ಪಟ್ಟಿಯಲ್ಲಿಯೇ ಮುಂದುವರಿದಿದೆ.

ಬ್ರೆಜಿಲ್ ಸೋಂಕು ಮತ್ತು ಸಾವು ಪ್ರಕರಣಗಳಲ್ಲಿ ರಷ್ಯಾವನ್ನು ಹಿಂದಿಕ್ಕಿದೆ. ಅಮೆರಿಕದ ವಾಷಿಂಗ್ಟನ್‍ನ ಜಾನ್ಸ್ ಹಾಪ್‍ಕಿನ್ಸ್ ಯೂನಿವರ್ಸಿಟಿಯ ಅಂಕಿಅಂಶಗಳ ಪ್ರಕಾರ ಮೊನ್ನೆವರೆಗೆ ಲ್ಯಾಟಿನ್ ಆಮೆರಿಕ ದೇಶದಲ್ಲಿ 3,31 ಲಕ್ಷ ಮಂದಿಗೆ ಸೋಂಕು ದೃಢಪಟ್ಟಿದ್ದು, 21,000ಕ್ಕೂ ಹೆಚ್ಚು ರೋಗಿಗಳ ಸಾವಿಗೀಡಾಗಿದ್ದಾರೆ.

ನಿನ್ನೆ ಅದು 3.50 ಲಕ್ಷ ಪಾಸಿಟಿವ್ ಕೇಸ್ ಮತ್ತು 22,156 ಡೆತ್‍ಗೆ ಏರಿಕೆಯಾಗಿದೆ. ಬ್ರೆಜಿಲ್‍ನಲ್ಲಿ ಕಳೆದ 24 ತಾಸುಗಳಲ್ಲಿ 1,100 ಮಂದಿಯನ್ನು ಕಿಲ್ಲರ್ ಕೊರೊನಾ ಬಲಿ ತೆಗೆದುಕೊಂಡಿದೆ.

ಪ್ರತಿದಿನ ಸೋಂಕು ಮತ್ತು ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಬ್ರೆಜಿಲ್‍ನ ಬಹುತೇಕ ಎಲ್ಲ ನಗರಗಳು ಮತ್ತು ಪಟ್ಟಣಗಳು ವೈರಸ್ ದಾಳಿಯಿಂದ ಬಾತವಾಗಿದೆ.

ವಿಶ್ವದ ಟಾಪ್ ಫೈವ್ ಕೋವಿಡ್-19 ಅತಂಕ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ, ಬ್ರೆಜಿಲ್, ರಷ್ಯಾ, ಸ್ಪೇನ್ ಮತ್ತು ಇಟಲಿ ಸ್ಥಾನ ಪಡೆದಿದೆ.

Facebook Comments

Sri Raghav

Admin