ಕೊರೊನಾದಿಂದ ಬಳಲುತ್ತಿರುವ ಬ್ರೆಜಿಲ್ ಅಧ್ಯಕ್ಷರ ಚೇತರಿಕೆಗೆ ಮೋದಿ ಪ್ರಾರ್ಥನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.8- ಕೊರೊನಾ ಸೋಂಕು ಕಾಣಿಸಿಕೊಂಡಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಬಲ್ಸೋನರೋ ಅವರ ಆರೋಗ್ಯ ಚೇತರಿಕೆಗೆ ಪ್ರಧಾನಿ ನರೇಂದ್ರ ಮೋದಿ ಪ್ರಾರ್ಥಿಸಿದ್ದಾರೆ. ನಮ್ಮ ಪರಮಾಪ್ತರಾಗಿರುವ ಬ್ರೆಜಿಲ್ ಅಧ್ಯಕ್ಷರು ಮಹಾಮಾರಿಯಿಂದ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಮೋದಿ ಅವರು ಪೋರ್ಚುಗೀಸ್ ಮತ್ತು ಆಂಗ್ಲ ಭಾಷೆಯಲ್ಲಿ ಟ್ವಿಟ್ ಮಾಡಿದ್ದಾರೆ.

ಬ್ರೆಜಿಲ್ ಮತ್ತು ಭಾರತದ ನಡುವೆ ಉತ್ತಮ ಬಾಂಧವ್ಯವಿದೆ. ಹೀಗಾಗಿ ಮೋದಿ ಅವರು ಬಲ್ಸೋನರೋ ಅವರ ಆರೋಗ್ಯ ವಿಚಾರಿಸಿರುವುದು ಎರಡು ದೇಶಗಳ ನಡುವಿನ ಮತ್ತಷ್ಟು ಬಾಂಧವ್ಯಕ್ಕೆ ಮುನ್ನುಡಿ ಬರೆಯಲಿದೆ.

Facebook Comments