ಒಲಂಪಿಕ್ ಕ್ರೀಡೆಯಾಗಲಿದೆ ಬ್ರೇಕ್‍ಡ್ಯಾನ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಜಿನಿವಾ, ಡಿ.8-ಯುವ ಸಮುದಾಯವನ್ನು ಆಕರ್ಷಿಸುತ್ತಿರುವ ಬ್ರೇಕ್ ಡ್ಯಾನ್ಸ್ ಕೆಲವೇ ವರ್ಷಗಳಲ್ಲಿ ಒಲಂಪಿಕ್ ಕ್ರೀಡೆಯಾಗಲಿದೆ. 2024ರಲ್ಲಿ ಪ್ಯಾರಿಸ್‍ನಲ್ಲಿ ನಡೆಯಲಿರುವ ಒಲಂಪಿಕ್ಸ್‍ನಲ್ಲಿ ಬ್ರೇಕ್ ಡ್ಯಾನ್ಸ್ ಅನ್ನು ಅಕೃತ ಕ್ರೀಡೆಯನ್ನಾಗಿ ಘೋಷಿಸಿ ಡ್ಯಾನ್ಸ್ ಪಂದ್ಯಗಳಲ್ಲಿ ವಿಜೇತರಾದವರಿಗೆ ಪದಕ ಪ್ರದಾನ ಮಾಡಲು ತೀರ್ಮಾನಿಸಲಾಗಿದೆ.

ಅಂತಾರಾಷ್ಟ್ರೀಯ ಒಲಂಪಿಕ್ ಆಸೋಸಿಯೇಷನ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. 1970ರಲ್ಲಿ ಅಮೆರಿಕಾದಲ್ಲಿದ್ದ ಹಿಪ್‍ಹಾಪ್ ಡ್ಯಾನ್ಸ್‍ನಿಂದ ಬ್ರೇಕ್ ಡ್ಯಾನ್ಸ್ ಆಗಿ ಪರಿವರ್ತನೆಗೊಂಡು ವಿಶ್ವದ್ಯಾಂತ ಅಪಾರ ಯುವ ಸಮುದಾಯವನ್ನು ತನ್ನತ್ತ ಆಕರ್ಷಿಸುತ್ತಿರುವ ಬ್ರೇಕ್‍ಡ್ಯಾನ್ಸ್ 2024ರ ಪ್ಯಾರಿಸ್ ಒಲಂಪಿಕ್‍ನಲ್ಲಿ ಕ್ರೀಡೆಯಾಗಿ ಪರಿವರ್ತನೆಗೊಂಡಿರುವುದನ್ನು ಡ್ಯಾನ್ಸ್ ಪ್ರೇಮಿಗಳು ಸ್ವಾಗತಿಸಿದ್ದಾರೆ.

Facebook Comments

Sri Raghav

Admin