ಕಪ್ಪು ಸಮುದ್ರದಲ್ಲಿ ರಷ್ಯಾ ಸೇನಾ ವಿಮಾನ ಪತನ : 92 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Plane-01

ಮಾಸ್ಕೋ, ಡಿ.25-ರಷ್ಯಾದ ಸೇನಾ ವಿಮಾನವೊಂದು ಕಪ್ಪು ಸಮುದ್ರದಲ್ಲಿ ಪತನಗೊಂಡು 10 ಮಂದಿ ಸಿಬ್ಬಂದಿ ಸೇರಿದಂತೆ ಎಲ್ಲಾ 92 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ಸೋಚಿ ಪ್ರಾಂತ್ಯದಲ್ಲಿ ಸಂಭವಿಸಿದೆ.   ಬ್ಲಾಕ್ ಸೀ ಪ್ರದೇಶದಲ್ಲಿ ರಷ್ಯಾ ಮಿಲಿಟರಿಯ ಟಿಯು-154 ವಿಮಾನದ ಆವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನೆಯ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.  ಸಿರಿಯಾದ ಲಟಾಕಿ ಸೇನಾ ನೆಲೆಯಲ್ಲಿ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಪಾಲ್ಗೊಳ್ಳಲು ಈ ವಿಮಾನದಲ್ಲಿ ಯೋಧರು ಹಾಗೂ ರಷ್ಯಾ ಮಿಲಿಟರಿಯ ಅಧಿಕೃತ ಸಂಗೀತ ತಂಡ-ಅಲೆಗ್ಸಾಂಡರ್ ಎನ್‍ಸೆಂಬಲ್‍ನ ಸದಸ್ಯರು ತೆರಳುತ್ತಿದ್ದರು. ಅಲ್ಲದೇ 9 ಮಂದಿ ಮಾಧ್ಯಮದ ಪ್ರತಿನಿಧಿಗಳೂ ಇದ್ದರು.

ರಷ್ಯಾದ ರೆಸಾರ್ಟ್ ನಗರಿ ಸೋಚಿ ವಿಮಾನ ನಿಲ್ದಾಣದಿಂದ ಸ್ಥಳೀಯ ಕಾಲಾಮಾನ ಮುಂಜಾನೆ 5.20ರಲ್ಲಿ ಸಿರಿಯಾದ ಲಟಾಕಿಗೆ ತೆರಳಲು ಹಾರಿದ್ದ ವಿಮಾನ ವಾಯು ಸಂಚಾರ ನಿಯಂತ್ರಣ ಕೇಂದ್ರದ ರೇಡಾರ್ (ರೇಡಿಯೋ ಡಿಟೆಕ್ಷನ್ ಅಂಡ್ ರೇಂಜಿಂಗ್) ಸಂಪರ್ಕ ಕಡಿದುಕೊಂಡಿತ್ತು. ಈ ವಿಮಾನ ಮೇಲಕ್ಕೇರಿದ 20 ನಿಮಿಷಗಳ ನಂತರ ಕಪ್ಪು ಸಮುದ್ರ ಪ್ರದೇಶದ ರಷ್ಯಾ ವಾಯು ವ್ಯಾಪ್ತಿಯಿಂದ ಟಿಯು-154 ನಿಗೂಢವಾಗಿ ನಾಪತ್ತೆಯಾಗಿತ್ತು. ರೇಡಾರ್‍ನಿಂದ ಸಂಪರ್ಕ ಕಳೆದುಕೊಂಡ ನಂತರ ಆ ಪ್ರದೇಶದಲ್ಲಿ ನಿರಂತರ ಶೋಧ ಕಾರ್ಯಾಚರಣೆ ನಡೆಸಲಾಯಿತು.
ಸೋಚಿ ಕರಾವಳಿ ಪ್ರದೇಶದಿಂದ 1.5 ಕಿ.ಮೀ.ದೂರದಲ್ಲಿ 50 ರಿಂದ 70 ಮೀಟರ್ ಆಳವಿರುವ ಸ್ಥಳದಲ್ಲಿ ಟಿಯು-154 ವಿಮಾನದ ಬಿಡಿಭಾಗಗಳು ಪತ್ತೆಯಾದವು. ಕೆಲವು ಮೃತ ದೇಹಗಳೂ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ರಷ್ಯಾದ ಹೀಮಿಮಿಮ್ ಸೇನಾ ನೆಲೆಯಿಂದ ಸಿರಿಯಾಗೆ ತೆರಳಲು ಯೋಧರು ಅಗಾಗ ಈ ವಿಮಾನವನ್ನು ಬಳಸುತ್ತಿದ್ದರು. ಈ ಘೋರ ದುರಂತಕ್ಕೆ ಕಾರಣ ತಿಳಿದು ಬಂದಿಲ್ಲ. ವಿಮಾನದ ಬ್ಲಾಕ್‍ಬಾಕ್ಸ್ ಪತ್ತೆಯಾದ ನಂತರವೇ ಸ್ಪಷ್ಟ ಚಿತ್ರಣ ಲಭಿಸಲಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin