ಸ್ಕೂಬಾ ಡೈವಿಂಗ್‍ನಲ್ಲಿ ಹೊಸ ವಿಶ್ವದಾಖಲೆ ಸೃಷ್ಟಿಸಿದ ಹಿರಿಯಜ್ಜ..!

ಈ ಸುದ್ದಿಯನ್ನು ಶೇರ್ ಮಾಡಿ

ಸಾಧನೆ ಮತ್ತು ಸಾಹಸಕ್ಕೆ ವಯೋಮಾನ ಎಂದಿಗೂ ಅಡ್ಡಿಯಲ್ಲ ಎಂಬುದು ಈ ಜಗತ್ತಿನಲ್ಲಿ ಅನೇಕ ಬಾರಿ ಸಾಬೀತಾಗಿದೆ. ವಯೋವೃದ್ದರೊಬ್ಬರು ಈ ಹಿಂದೆ ತಾವೇ ಸೃಷ್ಟಿಸಿದ ವಿಶ್ವ ದಾಖಲೆಯನ್ನು ತಾವೇ ಮುರಿದು ಗಮನಸೆಳೆದಿದ್ದಾರೆ. ಬನ್ನಿ ಈ ಕಿಲಾಡಿ ತಾತನನ್ನು ನಾವೀಗ ಭೇಟಿ ಮಾಡೋಣ..

ಎರಡನೇ ವಿಶ್ವ ಯುದ್ಧದ ಮಾಜಿ ಯೋಧ ಹಾಗೂ 96 ವರ್ಷದ ಸಾಹಸಿ ವೂಲೇ ತಮ್ಮ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು ಸ್ಕೂಬಾ ಡೈವಿಂಗ್ ಮಾಡಿ ತಮ್ಮ ವಿಶ್ವ ದಾಖಲೆಯನ್ನು ಈ ವಯೋವೃದ್ದರು ಮುರಿದಿದ್ಧಾರೆ. ವಿಶ್ವದ ಅತ್ಯಂತ ಹಿರಿಯ ಸ್ಕೂಬಾ ಡೈವರ್ ಎಂದೇ ಖ್ಯಾತಿ ಪಡೆದಿರುವ ಇವರು ಸತತ ಮೂರನೇ ವರ್ಷ ಈ ಶಾಧನೆ ಮಾಡಿದ್ದಾರೆ.

ಸೈಪ್ರಸ್‍ನ ನೌಕಾ ದುರಂತದ ಸ್ಥಳದಲ್ಲಿ ವೂಲೇ ಸ್ಕೂಬಾ ಡೈವಿಂಗ್ ಮಾಡಿದರು. ಇವರು ನೀರಿನಲ್ಲಿ ಮುಳುಗಿದ ಆಳ 15 ಅಂತಸ್ತುಗಳ ಎತ್ತರದ ಕಟ್ಟಡಕ್ಕೆ ಸಮ. ಇವರು ನೀರಿನೊಳಗೆ 42.4 ಮೀಟರ್‍ಗಳಷ್ಟು ಆಳಕ್ಕೆ ಡೈವ್ ಮಾಡಿ ಅಲ್ಲಿ 48 ನಿಮಿಷಗಳ ಕಾಲ ಇದ್ದರು. ಕಳೆದ ವರ್ಷ ಈ ಸಾಹಸಿ ಅಜ್ಜ 40.6 ಮೀಟರ್‍ಗಳಷ್ಟು ಆಳಕ್ಕೆ ಇಳಿದು 44 ನಿಮಿಷಗಳ ಕಾಲ ಈಜಾಡಿದ್ದರು.
ನಾನು ಈಗಲೂ ಸದೃಢವಾಗಿದ್ದೇನೆ. ಮುಂದಿನ ವರ್ಷ ಮತ್ತೊಂದು ಹೊಸ ದಾಖಲೆ ನಿರ್ಮಿಸುತ್ತೇನೆ ಎಂದು ವಿಶ್ವಾಸ ತುಂಬಿದ ಮಾತುಗಳಲ್ಲಿ ಹೇಳುತ್ತಾರೆ ವೂಲೇ.

ಸಾಹಸ ಮತ್ತು ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಸಾಬೀತು ಮಾಡಿರುವ ಈ ವಯೋವೃದ್ದರು 2017 ಮತ್ತು 2018ರಲ್ಲಿ ತಾವೇ ನಿರ್ಮಿಸಿದ್ದ ದಾಖಲೆಗಳನ್ನು ಈಗ ಮತ್ತಷ್ಟು ಉತ್ತಮಪಡಿಸಿಕೊಂಡಿದ್ದಾರೆ.

ವಾಯುವ್ಯ ಇಂಗ್ಲೆಂಡ್‍ನ ಪೋರ್ಟ್ ಸನ್‍ಲೈಟ್ ಪ್ರದೇಶದವರಾದ ಈ ಸದೃಢ ಅಜ್ಜ ಈಗ ಸೈಪ್ರಸ್‍ನಲ್ಲಿ ನೆಲೆಸಿದ್ದಾರೆ. ದ್ವಿತೀಯ ಮಹಾ ಸಂಗ್ರಾಮದಲ್ಲಿ ಇವರು ರೇಡಿಯೋ ಆಪರೇಟರ್ ಆಗಿ ಕಾರ್ಯನಿರ್ವಹಿಸಿದ್ದರು. ವೂಲೀ ಜೀವನ ಸಾಧನೆ ಕುರಿತ ಲೈಫ್ ಬಿಗಿನ್ಸ್ ಅಟ್ 90 ಎಂಬ ಸಾಕ್ಷ್ಯಚಿತ್ರವು. ಬೊಸ್ನಿಯಾ ಮತ್ತು ಹರ್ಜೆಗೋವಿನಾ ಚಲನಚಿತ್ರೋತ್ವದಲ್ಲಿ ಪ್ರದರ್ಶನವಾಗಲಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ